News

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶ್ರಮದಾನ

ಪೊಳಲಿ, ಜು 22: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ಸಾಗಿದ್ದು ಮಾಣಿ ಶಂಭುಗದ ಶಂಭುಗ ಫ್ರೆಂಡ್ಸ್ ಸಂಘದ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಜು. ೨೨ರ ಭಾನುವಾರ ಕರ ಸೇವೆ, ಶ್ರಮದಾನ ಮಾಡಿದರು.

ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವ್ಯಾಪ್ತಿಯಲ್ಲಿ ಸಾವಿರ ಸೀಮೆ ಇದ್ದು, ಎಲ್ಲ ಕಡೆಯ ಹೆಚ್ಚಿನ ಸಂಘ-ಸಂಸ್ಥೆಯ ಕಾರ್ಯಕರ್ತರು, ಯುವಜನರು ಹಾಗೂ ಸುತ್ತಲ-ದೂರದ ಆಸ್ತಿಕ ಬಂಧುಗಳು ಇಲ್ಲಿಗಾಗಮಿಸಿ ಮಳೆ-ಗುಡುಗು-ಮಿಂಚು ಲೆಕ್ಕಿಸದೆ ಶ್ರಮದಾನ ನಡೆಸುತ್ತಿದ್ದಾರೆ. ಯುವಜನರ ತಂಡ ಅತ್ಯಂತ ಲವಲವಿಕೆಯಿಂದ ಶ್ರಮದಾನ ನಡೆಸಿ, ಆಡಳಿತ ಮಂಡಳಿಯ ಪ್ರಸಂಶೆಗೆ ಪಾತ್ರವಾಗಿದೆ.