News

ಕುಕ್ಕಾಜೆ: ಒಂದೇ ಜಾತಿ ಒಂದೇ ಮತ ಕೂಡಿ ಬಾಳೋಣ- ಶ್ರೀಕೃಷ್ಣ ಗುರುಜೀ

ಕುಕ್ಕಾಜೆ, ಜೂ: ಒಂದೇ ಜಾತಿ ಒಂದೇ ಮತ ಎಲ್ಲಾ ಸಮುದಾಯದವರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕು. ಇದರೊಂದಿಗೆ ಗುರು ಭಕ್ತಿ, ಹೆತ್ತವರ ಮೇಲೆ ಗೌರವವಿದ್ದರೆ ಮುಂದಿನ ಭವಿಷ್ಯ ಉಜ್ವಲವಾಗುವುದು ಎಂದು ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಹೇಳಿದರು. ಅವರು ಮುಚ್ಚಿರ ಪದವು ಶಾಲಾ ಮಕ್ಕಳಿಗೆ ಪುಸ್ತಕ ವಿತರಣ ಸಂದರ್ಭದಲ್ಲಿ ಮಾತನಾಡಿ ಶಿಕ್ಷಣ ಮೌಲ್ಯದ ಬಗ್ಗೆ ವಿವರಿಸಿದರು.

ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಚ್ಚಿರ ಪದವು ಶಾಲಾ ಮಕ್ಕಳಿಗೆ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ವತಿಯಿಂದ ಪುಸ್ತಕ ವಿತರಣ ಕಾರ್ಯ ಕ್ರಮವು ಶಾಲಾಭಿವೃದ್ದಿ ಸಮಿತಿ ಉಪಾದ್ಯಕ್ಷರಾದ ಪುಷ್ಪರಾಜ್ ಇವರ ಅದ್ಯಕ್ಷತೆಯಲ್ಲಿ ನಡೆಯಿತು. ದೇವಸ್ಥಾನದಿಂದ ಉಚಿತ ಪುಸ್ತಕ ಅಲ್ಲದೆ ಶಾಲಾ ಕಟ್ಟಡ ದುರಸ್ತಿ ಕಾಮಗಾರಿಗೆ ಸಹಕರಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್, ಕ್ಷೇತ್ರದ ಸೇವಾ ಸಮಿತಿ ಕಾರ್ಯದರ್ಶಿ ರವಿ ಎಸ್ಎಂ , ಶಿಕ್ಷಕಿ ವಿಜಯಲಕ್ಷ್ಮೀ , ಪೋಷಕರು ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ನಾಗೇಶ್ ಸ್ವಾಗತಿಸಿ ಶಿಕ್ಷಕಿ ಸುಮ ವಂದಿಸಿದರು.