News

ಕುಂದಾಪುರ : ಬೈಕ್ ಅಪಘಾತ - ಪೋಟೋಗ್ರಾಫರ್ ಸಾವು

ಕುಂದಾಪುರ, ಮೇ 24: ಕುಂದಾಪುರದಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೇ 23ರ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಛಾಯಾ ಗ್ರಾಹಕ ದೀಪಕ್ (38) ಮೃತ ಬೈಕ್ ಸವಾರ.

ಮೇ 22 ರ ಮಂಗಳವಾರ ರಾತ್ರಿ ಕುಂದಾಪುರದ ಕೋಣಿಯ ಹುಣ್ಸಿಕಟ್ಟೆ ಎಂಬಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ, ನೂತನವಾಗಿ ನಿರ್ಮಾಣಗೊಂಡಿದ್ದ ಸೇತುವೆಗೆ ಹಾಕಲಾಗಿದ್ದ ಸ್ಪೀಡ್ ಬ್ರೇಕರ್ ನ್ನು ಗಮನಿಸದೇ ವೇಗವಾಗಿ ಚಲಿಸಿದ ಕಾರಣ ಅವಘಡ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ದೀಪಕ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಇನ್ನು ಅಗಲಿದ ದೀಪಕ್ ಅವರಿಗೆ ಛಾಯಗ್ರಾಹಕರ ಸಂಘದ ವತಿಯಿಂದ ಸಂತಾಪ ಸೂಚಿಸಲಾಯಿತು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.