News

ಕಾರ್ಯಕರ್ತರನ್ನು ಮುಟ್ಟಿದ್ರೆ ಜೋಕೆ - ಟ್ವಿಟರ್ ನಲ್ಲಿ ಸಂಸದ ಪ್ರತಾಪ್ ಸಿಂಹ 'ಪ್ರತಾಪ'

ಮೇ 17: ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಡೋಲಾಮಯ ಸ್ಥಿತಿಯಲ್ಲಿರುವಾಗಲೇ, ಅತ್ತ ಕಡೆ ಸಂಸದ ಪ್ರತಾಪ ಸಿಂಹ ಟ್ವಿಟರ್ನಲ್ಲಿ ಗುಡುಗಿದ್ದಾರೆ. ಬಿ. ಎಸ್ . ಯಡಿಯೂರಪ್ಪ ಅಧಿಕಾರ ಸ್ವೀಕರಿಸುವ ಕೆಲವು ಗಂಟೆಗಳ ಹಿಂದೆ ಟ್ವೀಟ್ ಮಾಡಿದ,ಸಂಸದ ಪ್ರತಾಪ್ ಸಿಂಹ " ನಮ್ಮ ಕಾರ್ಯಕರ್ತರನ್ನ ನಾಳೆಯಿಂದ ಮುಟ್ಟಿದ್ರೆ ಜೋಕೆ! 23 ಜನರನ್ನ ಕಳೆದುಕೊಂಡ ನೋವಿಗೆ ನಾಳೆ ಅಂತಿಮ ತೆರೆ " ಎಂದು ಟ್ವೀಟ್ ಮಾಡಿದ್ದು, ಇದರ ಬಗ್ಗೆ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ.