News

ಕರ್ನಾಟಕ ಎಫೆಕ್ಟ್ - ಗೋವಾ , ಬಿಹಾರದಲ್ಲೂ ರಾಜಕೀಯ ಹೈಡ್ರಾಮ

ಮೇ, 17: ಕರ್ನಾಟಕ ರಾಜಕೀಯದಲ್ಲಿ ರೋಚಕ ತಿರುವು ಪಡೆಯುತ್ತಿರುವಂತೆ ಇದರ ಎಫೆಕ್ಟ್ ಸಮೀಪದ ಗೋವಾ ಮತ್ತು ಬಿಹಾರದ ರಾಜಕೀಯದ ಮೇಲೂ ಪರಿಣಾಮ ಬೀರಿದೆ.

ಕರ್ನಾಟಕದಲ್ಲಿ ಅತೀ ಹೆಚ್ಚು ಬಹುಮತ ಪಡೆದ ಪಕ್ಷಕ್ಕೆ ಸರಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ ಹಿನ್ನಲೆಯಲ್ಲಿ ಅತ್ತ ಕಡೆ ಎಚ್ಚೆತ್ತುಕೊಂಡಿರುವ ಗೋವಾ ರಾಜ್ಯದ ಕಾಂಗ್ರೆಸ್ ಮತ್ತು ಬಿಹಾರ ಅತೀ ದೊಡ್ಡ ಪಕ್ಷವಾಗಿರುವ ಆರ್.ಜೆ.ಡಿ ಸರಕಾರ ರಚನೆಗೆ ಹಕ್ಕು ಮಂಡಿಸಲು ಸಿದ್ದತೆ ನಡೆಯತೊಡಗಿದೆ. ಗೋವಾದ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಶಾಸಕರನ್ನು ಹೊಂದಿದ್ದು ಅತೀ ದೊಡ್ಡ ಪಕ್ಷವಾಗಿದೆ. ಹೀಗಾಗಿ ಕರ್ನಾಟದಂತೆ ನಮಗೂ ಕೂಡಾ ಸರಕಾರ ರಚನೆಗೆ ಮಾಡಲು ಅವಕಾಶ ಕೊಡಬೇಕು ಎಂದು ರಾಜ್ಯಪಾಲರಲ್ಲಿ ಮನವಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.