News

ರೈತರ ಸಾಲ ಮನ್ನಾ ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟ - ಸಿಎಂ ಬಿಎಸ್ ವೈ

ಬೆಂಗಳೂರು, ಮೇ 17 : ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಮ್ಮ ಮೊದಲಪತ್ರಿಕಾಗೋಶ್ಟಿಯನ್ನು  ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಅಧಿಕಾರಕ್ಕಾಗಿ ಅತಿ ಆಸೆಯಿಂದ  ಕಾಂಗ್ರೆಸ್ -ಜೆಡಿಎಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ ಎಂದು ಹೇಳಿದರು.

 ರೈತರ ಬೆಳೆ ಸಾಲ ಮನ್ನಾ ಮಾಡಲು ಬೇಕಾಗಿರುವ ದಾಖಲೆಗಳನ್ನು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ನಾನು ಸೂಚಿಸಿದ್ದೇನೆ ಸಿಎಂ ಯಡಿಯೂರಪ್ಪ, ತಿಳಿಸಿದ್ದಾರೆ. ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಬೆಳೆ ಸಾಲ, ಸಹಕಾರಿ ಬ್ಯಾಂಕ್ ಗಳು ನೀಡಿದ ಬೆಳೆ ಸಾಲ ಹಾಗೂ ನೇಕಾರರ ಸಾಲ ಮನ್ನಾ ಮಾಡಲು ಬೇಕಾದ ಅಗತ್ಯತೆಗಳ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಜತೆ ಚರ್ಚೆ ನಡೆಸಿದ್ದೇನೆ. ನಾಳೆ ಈ ಸಂಬಂಧ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ. 

ಅಲ್ಲದೆ ಶೀಘ್ರವೇ ಬಹುಮತ ಸಾಬೀತು ಪಡಿಸಿ, ಸಂಪುಟ ಸಭೆಯ ಪ್ರಮಾಣ ವಚನಕ್ಕೆ ಪ್ರಧಾನಿ ನರೇಂದ್ರ ಮೋದಿ, ಹಾಗೂ ಶಾ ಅವರನ್ನು ಆಹ್ವಾನಿಸುವ ವಿಶ್ವಾಸ ವ್ಯಕ್ತಪಡಿಸಿದರು.