News

ಮಂಗಳೂರು: ಹಯಾತುಲ್ ಇಸ್ಲಾಂ ಮಸೀದಿಯ ಅಧ್ಯಕ್ಷರಾಗಿ ಅಬ್ದುಲ್ ನಝೀರ್ ಆಯ್ಕೆ

ಮಂಗಳೂರು, ಮೇ 17: ಹಯಾತುಲ್ ಇಸ್ಲಾಂ ಬದ್ರಿಯ ಜುಮಾ ಮಸೀದಿ ಮತ್ತು ಮದರಸ ಎದುರುಪದವು ಇದರ 2018-19ನೇ ಸಾಲಿನ ಮಹಾಸಭೆ ಮಸೀದಿಯ ಖತೀಬರಾದ ಅಸ್ಸಯ್ಯದ್ ಶಿಯಾಬುದ್ದಿನ್ ತಂಜ್ಞಲ್ ಕಿನ್ಯಾ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾಸಭೆಯಲ್ಲಿ ಮಸೀದಿಯ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ಅಧ್ಯಕ್ಷರಾಗಿ ಅಡ್ವಕೇಟ್ ಅಬ್ದುಲ್ ನಝೀರ್, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್, ಕೋಶಾಧಿಕಾರಿ ಮಹಮ್ಮದ್ ಮೂಸಾ, ಉಪಾದ್ಯಕ್ಷರಾಗಿ ಮಹಮ್ಮದ್ ಮುಕ್ರಿ, ಜೊತೆ ಕಾರ್ಯಾದರ್ಶಿಯಾಗಿ ಮಹಮ್ಮದ್ ಮನ್ಸೂರ್, ಅಬ್ದುಲ್ ಅಝೀಝ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಅಬ್ದುಲ್ ರಝಾಕ್, ಅಬ್ದುಲ್ ಖಾದರ್, ಕೂಳೂರು ಹಮೀದ್, ಅತವುಲ್ಲಾ, ಕಲಂದರ್, ಮಹಮ್ಮದ್ ಹನೀಫ್ ಮುಂತಾದವರು ಆಯ್ಕೆಯಾಗಿದ್ದಾರೆ.