News

ಪ್ರತಿಭಟನೆಯ ಅಸ್ತ್ರ ಹೂಡಿದ ಕಾಂಗ್ರೆಸ್ - ಜೆಡಿಎಸ್ : ಕೊನೆ ಕ್ಷಣದಲ್ಲಿ ಕೈ ಹಿಡಿದ ಕೆಪಿಜೆಪಿ ಶಂಕರ್

ಬೆಂಗಳೂರು ಮೇ 16: ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡದಿದ್ದರೆ, ಪ್ರತಿಭಟನೆಯ ನಿರ್ಧಾರ ಕೈಗೊಳ್ಳುವ ಎಚ್ಚರಿಕೆಯನ್ನು ಕಾಂಗ್ರೆಸ್- ಜೆಡಿಎಸ್ ಶಾಸಕರು ನೀಡಿದ್ದು ಈ ಮೂಲಕ ರಾಜ್ಯಪಾಲರ ಮೇಲೆ ಒತ್ತಡ ತಂತ್ರ ಉಪಾಯ ಕಂಡುಹುಡುಕಿದ್ದಾರೆ.

 

ರಾಜಭವನದ ಮುಂದೆ ಸತ್ಯಾಗ್ರಹಕ್ಕೆ ನಡೆಸಲು ಜೆಡಿಎಸ್- ಕಾಂಗ್ರೆಸ್ ಶಾಸಕರ ಜತೆಯಾಗಿ ನಿರ್ಧಾರ ಕೈಗೊಂಡಿದ್ದಾರೆ. ಆ ಮೂಲಕ ಬುಧವಾರ ಸಂಜೆಯೊಳಗೆ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಒತ್ತಾಯಿಸುವ ಸಾಧ್ಯತೆಯಿದೆ. ಸತ್ಯಾಗ್ರಾಹಕ್ಕೆ ಕಾಂಗ್ರೆಸ್ ರಾಷ್ಟ್ರೀಯ ವರಿಷ್ಠರು ಜೊತೆಯಾಗಲಿದ್ದಾರೆ.ಈ ನಡುವೆ ಬಿಜೆಪಿ ಪಕ್ಷಕ್ಕೆ ತನ್ನ ಬೆಂಬಲ ವ್ಯಕ್ತಪಡಿಸುತ್ತಿದ್ದ, ರಾಣೆ ಬೆನ್ನೂರಿನ ಕೆಪಿಜೆಪಿ ಶಾಸಕ ಶಂಕರ್ ಕೊನೆ ಕ್ಷಣದಲ್ಲಿ ಕಮಲ ತೊರೆದು ಕೈಗೆ ತನ್ನ ಬೆಂಬಲ ವ್ಯಕ್ತಪಡಿಸಿದ್ದಾರೆ.