News

ಅಡ್ಯಾರ್ ಪದವಿನಲ್ಲಿ ಕಲ್ಲು ತೂರಾಟ- ಹಲವರಿಗೆ ಗಾಯ


ಮಂಗಳೂರು, ಮೇ 16 : ಅಡ್ಯಾರ್ ಪದವಿನಲ್ಲಿ ಮಂಗಳವಾರ ಸಂಜೆ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಮೆರವಣಿಗೆ ವೇಳೆ ಕೆಲವು ದುಷ್ಕರ್ಮಿಗಳು ಮನೆ ಮಂದಿರಕ್ಕೆ ಕಲ್ಲು ತೂರಾಟ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ. ಮಂಗಳೂರು ಉತ್ತರವಿಧಾನಸಭೆ ಕ್ಷೇತ್ರದ ಬಿಜೆಪಿ ಜಯದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಜೆ 6.30 ಕ್ಕೆ ವಿಜಯೋತ್ಸವ ಮೆರವಣಿಗೆ ಆಯೋಜಿಸಿದ್ದರು. ಮೆರವಣಿಗೆ ಸಾಗುತ್ತಿದ್ದಂತೆ ಕೆಲವು ದುಷ್ಕರ್ಮಿಗಳು, ಮಸೀದಿ ಬಳಿಯಿಂದ ಮನೆ ಶ್ರೀ ರಾಮಾಂಜನೇಯ ಮಂದಿರ ಮತ್ತು ವ್ಯಾಯಾಮ ಶಾಲೆಗೆ ಕಲ್ಲು ತೂರಾಟ ನಡೆಸಿದ್ದು, ಮನೆ ಮಂದಿರಕ್ಕೆ ಹಾನಿಯಾಗಿದೆ. ಇದರೊಂದಿಗೆ ಅಲ್ಲೇ ಇದ್ದ ಬೈಕ್ ಹಾಗೂ ಕಾರಿನ ಮೇಲೂ ದಾಳಿ ಮಾಡಿದ್ದಾರೆ.
ಈ ಸಂದರ್ಭ ಮಂದಿರದ ಬಳಿ ಅಳವಡಿಸಲಾಗಿದ್ದ ಬೋರ್ಡ್‌ಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

 

 

 

 

 

ಘಟನೆಯಲ್ಲಿ ಅಡ್ಯಾರ್‌ಪದವಿನ ನಿವಾಸಿಗಳಾದ ದೇವಿಪ್ರಸಾದ್ ,ಲೊಕೇಶ್, ವನಜಾಕ್ಷ, ಅಶೋಕ್, ಅರುಣ್, ಅಭಿಜಿತ್ , ಸಫ್ವಾನ್, ಎಂಬವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಡ್ಯಾರ್‌ಪದವಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.