News

ಕಾಂಗ್ರೆಸ್ ನಿಂದ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ - ಬಿಜೆಪಿ ಶಾಸಕರನ್ನು ತನ್ನತ್ತ ಸೆಳೆಯಲು 'ಕೈ' ಮಸಲತ್ತು

ಬೆಂಗಳೂರು ಮೇ 16 : ಬಿಜೆಪಿಯಿಂದ ಆಯ್ಕೆಯಾದ ಶಾಸಕರನ್ನು  ತನ್ನತ್ತ ಸೆಳೆಯಲು ಸಿದ್ದತೆ ಮಾಡಿಕೊಂಡಿರುವ ಕಾಂಗ್ರೆಸ್ ಈ ಮೂಲಕ ಬಿಜೆಪಿ ಪಕ್ಷಕ್ಕೆ ಮಾಸ್ಟರ್ ಸ್ಟ್ರೋಕ್ ನೀಡಲು ಸಿದ್ದತೆ ಮಾಡಿಕೊಂಡಿದೆ. ಇದರ ಉಸ್ತುವಾರಿಯನ್ನು ಕಾಂಗ್ರೆಸ್ ಹೈಕಮಾಂಡ್  ಡಾ. ಜಿ ಪರಮೇಶ್ವರ್ ಹಾಗೂ ಡಿ. ಕೆ ಶಿವಕುಮಾರ್ ಅವರಿಗೆ ನೀಡಿದ್ದು ಉತ್ತರ ಕರ್ನಾಟಕ ಹಾಗೂ ಹೈದರಬಾದ್ ಕರ್ನಾಟಕದ  ಸುಮಾರು 10 ಶಾಸಕರಿಗೆ ಗಾಳ ಹಾಕಲು ಕಾಂಗ್ರೆಸ್  ಮುಂದಾಗಿ಼ದೆ.

ಇದು ರಾಜಕೀಯ ತಂತ್ರಗಾರಿಕೆಯೋ ಅಥವಾ ನಿಜಕ್ಕೂ ಕೂಡಾ ಬಿಜೆಪಿ ಶಾಸಕರನ್ನು ಸೆಳೆಯಲು ಕೈ ಮಸಲತ್ತು ಮಾಡಿಕೊಳ್ಳುತ್ತಿದೆಯೋ ಅನ್ನೋದನ್ನು ಕಾದು ನೋಡಬೇಕು.