News

ಸರಕಾರ ರಚಿಸಲು ಕಸರತ್ತು - ಒಂದೆಡೆ ಬಿಜೆಪಿ ಹಾಗೂ ಇನ್ನೊಂದೆಡೆ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ಆರಂಭ

ಬೆಂಗಳೂರು , ಮೇ 16 : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ಸರಳ ಬಹುಮತ ದೊರೆಯದ ಹಿನ್ನಲೆಯಲ್ಲಿ, ಅತಂತ್ರದ ಆಟ ಪ್ರಾರಂಭವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕೈ ಕಸರತ್ತು ಮಾಡುತ್ತಿದ್ದು, ಹೀಗಾಗಿ ಹಳೆ ವೈರತ್ವವನ್ನು ಮರೆತು ಜೆಡಿಎಸ್ ಸರಕಾರ ರಚನೆಗೆಬೆಂಬಲ ಘೋಷಿಸುವ ಮೂಲಕ ಬಿಜೆಪಿಗೆ ಠಕ್ಕರ್ ನೀಡಲು ಮುಂದಾಗಿದೆ. ಈಗಾಗಲೇ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದ್ದು, ಸರ್ಕಾರ ರಚಿಸಲು ತಮ್ಮದೇ ಆದಾ ಕಾರ್ಯತಂತ್ರ ರೂಪಿಸುವ ಸಿದ್ದತೆಯಲ್ಲಿ ತೊಡಗಿದೆ. ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಅಪರೇಷನ್ ಕಮಲಕ್ಕೆ ತುತ್ತಾಗುವ ಲಕ್ಷಣ ಗೋಚರಿಸುತ್ತಿದೆ.

ಇತ್ತ ಕಡೆ ಮೋದಿ ಚಾಣಕ್ಯತನದಿಂದ ಕರ್ನಾಟಕದಲ್ಲಿ ಅರಳುತ್ತಾ ಕಮಲ ಎನ್ನುವ ಕೂತೂಹಲ ರಾಜ್ಯ ರಾಜಕಾರಣದಲ್ಲಿ ಮೂಡಿದ್ದು ಬಿಜೆಪಿ ಪಕ್ಷದ ಶಾಸಕಾಂಗದ ಸಭೆ ಪ್ರಾರಂಭವಾಗಿದೆ. ಈ ಸಂದರ್ಭ ಮಾತನಾಡಿದ ಶೋಭಾ ಕಾರಂದ್ಲಾಜೆ ನಾವು ಸರ್ಕಾರ ರಚನೆ ಮಾಡಿಯೇ ಸಿದ್ದ ಎಂದಿದ್ದಾರೆ