News

ಬುದ್ದಿವಂತರ ಜಿಲ್ಲೆಯಲ್ಲಿ ನೋಟಾ'ದತ್ತ ಹಲವರ ನೋಟ!

ಮಂಗಳೂರು ,ಮೇ 15: ಬುದ್ದಿವಂತರ ಜಿಲ್ಲೆಯಲ್ಲಿ ನೋಟಾ’ದ (ಯಾವ ಅಭ್ಯರ್ಥಿಗೂ ಮತ ಇಲ್ಲ) ಚಲಾವಣೆಯಾಗಿದ್ದೂ, ಒಟ್ಟಾರೆ 8 ಸಾವಿರಕ್ಕೂ ಜನರು ನೋಟಾ ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಸುಳ್ಯ ಹಾಗೂ ಬೆಳ್ತಂಗಡಿ ಕ್ಷೇತ್ರದಲ್ಲಿ ಅತೀ ಹೆಚ್ಚು ನೋಟಾ ಮತಗಳು ಚಲಾವಣೆಯಾಗಿದೆ. ಸುಪ್ರೀಂ ಕೋರ್ಟ್‌ 2013ರಲ್ಲಿ ತೀರ್ಪು ನೀಡಿದ ನಂತರ ದೇಶದಲ್ಲಿ ‘ನೋಟಾ ಯುಗ’ ಪ್ರವೇಶಿಸಿತು. ಎಲೆಕ್ಟ್ರಾನಿಕ್‌ ಮತ ಯಂತ್ರಗಳಲ್ಲಿ ‘ನೋಟಾ’ ಆಯ್ಕೆಯನ್ನು ನೀಡಬೇಕು ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು . ಯಾವ ಅಭ್ಯರ್ಥಿಗೂ ಮತ ನೀಡದಿರುವ ಹಕ್ಕನ್ನು ಮತದಾರರಿಗೆ ಕೊಡುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯವಾದದ್ದು ಎಂದು ಕೋರ್ಟ್‌ ಹೇಳಿತ್ತು.ಜಿಲ್ಲೆಯಲ್ಲಿ ಚಲಾವಣೆಯಾದ ನೋಟಾ ಮತಗಳು 
ಬಂಟ್ವಾಳ ಕ್ಷೇತ್ರ - ನೋಟಾ -946
ಮಂಗಳೂರು ಕ್ಷೇತ್ರ -ನೋಟಾ -821
ಮಂಗಳೂರು ದಕ್ಷಿಣ ಕ್ಷೇತ್ರ - ನೋಟಾ -1063
ಮಂಗಳೂರು ಉತ್ತರ ಕ್ಷೇತ್ರ- ನೋಟಾ - 1166
ಮೂಡಬಿದಿರೆ ಕ್ಷೇತ್ರ- ನೋಟಾ-1037
ಬೆಳ್ತಂಗಡಿ ಕ್ಷೇತ್ರ- ನೋಟಾ - 1245
ಸುಳ್ಯ ಕ್ಷೇತ್ರ -ನೋಟಾ - 1310
ಪುತ್ತೂರು- ನೋಟಾ-1227
ಒಟ್ಟಾರೆ ನೋಟಾ ಮತಗಳು 8815