News

ಸರ್ಕಾರ ರಚನೆಗೆ ಪಕ್ಷಗಳ ಕಸರತ್ತು - ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮ

ಬೆಂಗಳೂರು, ಮೇ.15: ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮ ಪ್ರಾರಂಭವಾಗಿದೆ. ಸ್ಪಷ್ಟ ಬಹು ಮತ ಬಿಜೆಪಿಗೆ ದೊರೆಯದ ಹಿನ್ನಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಸರ್ಕಾರ ರಚನೆ ಮಾಡಲು ತೆರೆಮರೆಯಲ್ಲಿ ಕಸರತ್ತು ನಡೆದಿದೆ. ಮತಎಣಿಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತದಲ್ಲಿ ಸ್ಥಾನ ಗಳಿಕೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೂಡಾ ಸರಕಾರ ರಚನೆಗೆ ಬೆರಳೆಣಿಕೆಯ ಸ್ಥಾನಗಳ ಕೊರತೆ ಎದುರಾಗಿದೆ. ಹೀಗಾಗಿ ಸರ್ಕಾರ ರಚನೆಗೆ ಜೆಡಿಎಸ್ ಪಕ್ಷದ ಪ್ರತಿಕ್ರಿಯೆ ಬಹುಮುಖ್ಯವಾಗಿದೆ.