News

ಮೂಡುಬಿದಿರೆಯಲ್ಲಿ ಅರಳಿದ ಕಮಲ- ಬಿಜೆಪಿ ಉಮನಾಥ್ ಕೋಟ್ಯಾನ್ ಗೆ ಜಯ


ಮೂಡುಬಿದಿರೆ: ಕಳೆದ ಬಾರಿ ಚುನಾವಣೆಯಲ್ಲಿ ಉಮಾನಾಥ್ ಕೋಟ್ಯಾನ್ - 48461 ಪಡೆದಿದ್ದು ಈ ಬಾರಿ ಚುನಾವಣೆಯಲ್ಲಿ 22 ಸಾವಿರಕ್ಕೂ ಅಧಿಕ ಮತಗಳಿಂದ ಮೂಡುಬಿದಿರೆಯ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಜಯಗಳಿಸಿದ್ದಾರೆ .

ಉಮನಾಥ್‌ ಕೋಟ್ಯಾನ್‌ ಪರಿಚಯ
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ, ಮೂಡಬಿದಿರೆ ಕ್ಷೇತ್ರದ ಸಮಿತಿ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ ಉಮನಾಥ ಕೋಟ್ಯಾನ್ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಉಮನಾಥ ಕೋಟ್ಯಾನ್ ಆಗಿದ್ದರು.
ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರವಾಗಿ ಹಲವು ಕಾರ್ಯಕ್ರಮಗಳನ್ನು ಕರಾವಳಿಯಲ್ಲಿ ಆಯೋಜಿಸಿದವರು ಉಮನಾಥ ಕೋಟ್ಯಾನ್. ತುಳು ಭಾಷೆಯನ್ನು ಸಂವಿಧಾನದ ಹದಿನೆಂಟನೇ ಪರಿಚ್ಛೇದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ದೆಹಲಿ ತನಕ ಮನವಿ ಕೊಂಡು ಹೋಗಿದ್ದರು.