News

ಬಿಜೆಪಿ ಎರಡನೇ ಪಟ್ಟಿ ಇಂದು ಬಿಡುಗಡೆ ?

ಮಂಗಳೂರು, ಏ 16 : ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ರಾಜ್ಯ ಬಿಜೆಪಿ ಇದೀಗ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ತೊಡಗಿದೆ. ಕಾಂಗ್ರೆಸ್ ಪಟ್ಟಿ ಎದುರು ನೋಡುತ್ತಿದ್ದ ಬಿಜೆಪಿ ಎರಡನೇ ಪಟ್ಟಿ ಯನ್ನು ಏಪ್ರಿಲ್‌ 16 ರ ಸೋಮವಾರ ಬಿಡುಗಡೆಗೊಳಿಸಲು ನಿರ್ಧರಿಸಿದೆ . ಈ ಸಂಬಂಧ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ರಾತ್ರಿ ಚರ್ಚೆ ನಡೆಸಿದ್ದಾರೆ.

ಕಡತ ಚಿತ್ರ ಕಾಂಗ್ರೆಸ್ ಮೊದಲ ಪಟ್ಟಿಯಿಂದ ಉಂಟಾಗಿರುವ ಬಂಡಾಯದ ಬಗ್ಗೆ ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಟಿಕೆಟ್ ವಂಚಿತ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆಂದು ಹೇಳಲಾಗುತ್ತಿದ್ದು, ಕೋಲಾರದ ವಿ.ಆರ್. ಸುದರ್ಶನ ,ಪುಲಕೇಶಿ ನಗರದ ಪ್ರಸನ್ನಕುಮಾರ್ ಸಹಿತ ಟಿಕೆಟ್ ತಪ್ಪಿರುವ ಹಾಲಿ ಶಾಸಕರಲ್ಲಿ ಹಲವರನ್ನು ಸಂಪರ್ಕಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಕೆಲವೊಂದು ಕಡೆ ಟಿಕೆಟ್ ಸಿಗದ ಕಾಂಗ್ರೆಸ್ ಅತೃಪ್ತರು ಬಂಡಾಯಗಾರರಾಗಿ ಸ್ಪರ್ಧಿಸುವ ಸಾಧ್ಯತೆ ಇರೋದ್ರಿಂದ ಅಂತಹ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ನೋಡಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.