News

ಕಣ್ಣೀರು ಹಾಕಿದ ತರೀಕೆರೆ ಹಾಲಿ ಕಾಂಗ್ರೆಸ್ ಶಾಸಕನ ಪತ್ನಿ..!

ಏ, 15: ಟಿಕೆಟ್ ಘೋಷಣೆಗೆ ಮುಂಚೆಯೇ ಕಾಂಗ್ರೆಸ್ ನಲ್ಲಿ ಹಲವೆಡೆ ಆಕಾಂಕ್ಷಿಗಳ ಭಿನ್ನಮತ ಸ್ಫೋಟಗೊಂಡಿದ್ದು, ತರೀಕೆರೆಯ ಕಾಂಗ್ರೆಸ್ನಲ್ಲೂ ಅಸಮಾಧಾನ ಹೊಗೆಯಾಡುತ್ತಿದೆ. ತರೀಕೆರೆ ಹಾಲಿ ಕಾಂಗ್ರೆಸ್ ಶಾಸಕ ಜಿ.ಹೆಚ್. ಶ್ರೀನಿವಾಸ್ ಕೈ ಟಿಕೆಟ್ ತಪ್ಪಿದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಕಂಡು ಬರುತ್ತಿದೆ. ತನ್ನ ಪತಿಗೆ ಟಿಕೆಟ್ ಸಿಗದೆ ಇರಲು ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಶಾಸಕರ ಪತ್ನಿ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಶಾಸಕರ ಬೆಂಬಲಿಗರು ತರೀಕೆರೆಯಲ್ಲಿ ಸಭೆ ಸೇರಿ ಬಂಡಾಯ ನಿಲ್ಲಲು ಮನವೊಲಿಸುವುದಕ್ಕೆ ತೀರ್ಮಾನಿಸಿದ್ದಾರೆ. 

ಈ ಸಾರಿ ಕೈ ಟಿಕೆಟ್ ಬಹುತೇಕ ಕಾಂಗ್ರೆಸ್‌ನ ಹಿರಿಯ ಮುಖಂಡ ಗೋಪಿನಾಥ್‌ ಅವರಿಗೆ ಸಿಗುವ ಸಾಧ್ಯತೆ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಈ ಹಿನ್ನಲೆಯಲ್ಲಿ ಶಾಸಕರ ಪತ್ನಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷವನ್ನೇ ಪೂಜಿಸುತ್ತಿದ್ದ ನಮಗೆ ಪಕ್ಷ ಹಾಗೂ ಸಿದ್ದರಾಮಯ್ಯ ಮೋಸ ಮಾಡಿದ್ದು , ಮುಂದೆ ಜಿ.ಹೆಚ್. ಶ್ರೀನಿವಾಸ್ ಯಾವುದೇ ನಿರ್ಧಾರ ಕೈಗೊಂಡರೂ ನೀವು ಬೆಂಬಲಿಸಬೇಕು ಎಂದು ಸಭೆಯಲ್ಲಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.