News

ಮಂಗಳೂರು ಜೈಲಿಗೆ ದಿಡೀರ್ ದಾಳಿ - ನಿಷೇಧಿತ ಸೊತ್ತುಗಳ ಪತ್ತೆ

ಮಂಗಳೂರು, ಏ 15 : ಮಂಗಳೂರು ಜೈಲಿನಲ್ಲಿ ಬಿಗು ತಪಾಸಣೆ ಇದ್ದರೂ ನಿಷೇಧಿತ ಸೊತ್ತುಗಳು ವಿಚಾರಣಾಧೀನ ಕೈದಿಗಳ ಕೈಗೆ ಸೇರುತ್ತಿವೆ ಎನ್ನುವುದು ಶನಿವಾರ ನಡೆದ ದಾಳಿಯಿಂದ ಸಾಬೀತಾಗಿದೆ. ಡಿಸಿಪಿಗಳಾದ ಹನುಮಂತರಾಯ ಹಾಗೂ ಉಮಾ ಪ್ರಶಾಂತ್ ನೇತೃತ್ವದಲ್ಲಿ ಪೊಲೀಸರು ಜೈಲ್‌ನಲ್ಲಿ ದಿಢೀರ್ ತಪಾಸಣೆ ನಡೆಸಿದಾಗ ವಿಚಾರಣಾಧೀನ ಕೈದಿಗಳ ಬಳಿ 2 ಮೊಬೈಲ್ ಸಿಮ್, 3 ಮೊಬೈಲ್ ಸೆಟ್, 200 ಗ್ರಾಂ ಗಾಂಜಾ, ಕಬ್ಬಿಣದ ರಾಡ್, ಸಿಗರೆಟ್, ಬೀಡಿ ಕಟ್ಟುಗಳು, ತಂಬಾಕು, ಸಿಗರ್‌ಲೈಟ್ ಮೊದಲಾದ ನಿಷೇಧಿತ ಸೊತ್ತುಗಳು ಪತ್ತೆಯಾಗಿವೆ. 

 

ಜೈಲಿನ ಒಳಗಡೆ ಹೋಗುವವರನ್ನು ತಪಾಸಣೆ ಮಾಡುವ ಸಂಪೂರ್ಣ ಜವಾಬ್ದಾರಿ ಕೈಗಾರಿಕಾ ಭದ್ರತಾ ಪಡೆಗೆ ನೀಡಲಾಗಿದೆ ಅಲ್ಲದೆ ಅಲ್ಲಲ್ಲಿ ಸಿಸಿ ಕ್ಯಾಮರಾ, ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಕೈಗಾರಿಕಾ ಭದ್ರತಾ ಪಡೆಯೂ ಜೈಲು ಅಧಿಕಾರಿಗಳಿಂದ ಹಿಡಿದು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಬರುವ ವಿಚಾರಣಾಧೀನ ಕೈದಿಗಳು, ಅವರನ್ನು ಭೇಟಿಯಾಗಲು ಬರುವ ಮನೆಯವರು, ಸ್ನೇಹಿತರನ್ನು ತಪಾಸಣೆ ಮಾಡುವ ಅಧಿಕಾರ ಹೊಂದಿದ್ದಾರೆ.ಹೀಗಿದ್ದರೂ ಕೂಡಾ ನಿಷೇಧಿತ ಸೊತ್ತುಗಳ ಎಗ್ಗಿಲ್ಲದೆ ಜೈಲು ಸೇರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ದಾಳಿಯಲ್ಲಿ ವಶಪಡಿಸಿಕೊಂಡ ವಸ್ತು ಬರ್ಕೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.