News

ಕಾಸರಗೋಡು: ಗಾಂಜಾ ಮಾರಾಟಗಾರರ ಬಂಧನ- 10 ಕಿಲೋ ಗಾಂಜಾ ವಶ

 

ಕಾಸರಗೋಡು, ಏ 15 : ಸ್ಕೂಟರ್ ನಲ್ಲಿ ಸಾಗಾಟ ಮಾಡುತ್ತಿದ್ದ 10 ಕಿಲೋ ಗಾಂಜಾ ಸಹಿತ ಮೂವರನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.

ಬಂಧಿತರನ್ನು ನೆಲ್ಲಿಕಟ್ಟೆಯ ಪಿ .ಎಂ ಇಕ್ಬಾಲ್ ( 29), ಚೆನ್ನಡ್ಕದ ಪಿ .ಕೆ ಅಬ್ದುಲ್ ನೌಶಾದ್ ( 29) ಕೆ .ಎಂ ಅಬ್ದುಲ್ ರಜಾಕ್ (31) ಎಂದು ಗುರುತಿಸಲಾಗಿದೆ. ಅಬಕಾರಿ ದಳಕ್ಕೆ ಲಭಿಸಿದ ಮಾಹಿತಿಯಂತೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದಾಗ ಕರಂದಕ್ಕಾಡ್ ನಿಂದ ಇವರನ್ನು ಹಾಗೂ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಯಿತು .

ಇಕ್ಬಾಲ್ ಮತ್ತು ಅಬ್ದುಲ್ ನೌಶಾದ್ ವಿರುದ್ಧ ವಡಗರ , ಕಾಞ೦ಗಾಡ್ ಮೊದಲಾದ ಪೊಲೀಸ್ ಠಾಣೆಗಳಲ್ಲಿ ಗಾಂಜಾ ಸಾಗಾಟ ಪ್ರಕರಣ ಹಾಗೂ ಅಬ್ದುಲ್ ರಜಾಕ್ ವಿರುದ್ಧ ಕಳವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .
ಆಂಧ್ರಪ್ರದೇಶದಿಂದ ಮಂಗಳೂರು ಮೂಲಕ ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡಲಾಗುತ್ತಿದ್ದು, ಕಾಸರಗೋಡಿನ ಹಲವೆಡೆ ಮಾರಾಟ ಮಾಡಲು ಸಾಗಾಟ ಮಾಡಲಾಗುತಿತ್ತು ಎಂದು ತನಿಖೆ ಯಿಂದ ತಿಳಿದು ಬಂದಿದೆ.