News

ಕಾಸರಗೋಡು: ರಸ್ತೆ ದಾಟುವಾಗ ಪಾದಚಾರಿಗೆ ಡಿಕ್ಕಿ ಹೊಡೆದ ಲಾರಿ – ಸ್ಥಳದಲ್ಲೇ ಸಾವು

ಕಾಸರಗೋಡು, ಏ 13: ಆಟೋರಿಕ್ಷಾದಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೆಡಿಕಲ್ ಸೇಲ್ಸ್ ಮೆನ್ ಮೃತಪಟ್ಟ ಘಟನೆ ಕಾರಡ್ಕ ಹದಿಮೂರನೇ ಮೈಲಿನಲ್ಲಿ ನಡೆದಿದೆ

ಮೃತಪಟ್ಟವರನ್ನು ಅಡೂರು ಪಳ್ಳಂಜಿ ಕಾಟಿಪ್ಪಾರದ ಎಂ. ಚಂದ್ರನ್ ನಾಯರ್ (56) ಎಂದು ಗುರುತಿಸಲಾಗಿದೆ.

ಕಾಸರಗೋಡು ಹಳೆ ಬಸ್ ನಿಲ್ದಾಣದಲ್ಲಿ ಮೆಡಿಕಲ್ ಅಂಗಡಿಯೊಂದರಲ್ಲಿ ಸೇಲ್ಸ್‌ಮೆನ್ ಆಗಿದ್ದರು. ಕೆಲಸ ಮುಗಿಸಿ ಮುಳ್ಳೇರಿಯ ಪೇಟೆಗೆ ಹೋದ ಚಂದ್ರನ್ ನಾಯರ್ ಸಾಮಗ್ರಿ ಖರೀ ದಿಸಿ ಆಟೋ ರಿಕ್ಷಾದಲ್ಲಿ ಮನೆಗೆ ತೆರಳಿದ್ದರು. ಕಾರಡ್ಕ ಹದಿಮೂರನೇ ಮೈಲಿನಲ್ಲಿ ಆಟೋರಿಕ್ಷಾದಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಚೆರ್ಕಳ ಭಾಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಗಿದೆ. ಆದೂರು ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.