News

ಕುಂದಾಪುರ: ಕಚೇರಿಯಲ್ಲೇ ರಾಸಲೀಲೆ - ನಾಲ್ಕೂರು ಗ್ರಾಮ ಪಂಚಾಯತ್ ಪಿಡಿಓ ವೀಡಿಯೋ ಬಯಲು..!

ಕುಂದಾಪುರ, ಏ12 : ಪಂಚಾಯತ್ ಪಿಡಿಓ ಒಬ್ಬನ ರಾಸಲೀಲೆ ಪ್ರಕರಣವೊಂದು ಬಯಲಾಗಿದೆ. ಕುಂದಾಪುರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಪಿಡಿಓ ಅನಂತ ಪದ್ಮನಾಭ್ ನಾಯಕ್ ಮಹಿಳಾ ಸಿಬ್ಬಂದಿಯ ಜೊತೆ ರಾಸಲೀಲೆ ನಡೆಸಿದ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಅನಂತ ಪದ್ಮನಾಭ ನಾಯಕ್ ಒಂದು ವರುಷದಿಂದ ನಾಲ್ಕೂರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕರ್ತವ್ಯದ ವೇಳೆ ಸರ್ಕಾರಿ ಕಚೇರಿಯಲ್ಲೆ ಕಾಮದಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಿವಾಹಿತ ಯುವತಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವುದು ಬಯಲಾಗಿದೆ. ಮಹಿಳಾ ಸಿಬ್ಬಂದಿಯ ಜೊತೆ ಅಸಭ್ಯ ವರ್ತನೆ ನಡೆಸಿರುವುದಲ್ಲದೇ ಕಾನೂನು ಬಾಹಿರ ಚಟುವಟಿಕೆ,ಭ್ರಷ್ಟಚಾರದಲ್ಲಿ ಭಾಗಿಯಾಗಿರುವ ಆರೋಪ ಕೂಡ ಈತನ ಮೇಲಿದೆ. ಎಕ್ಸ್ ಮಿಲಿಟರಿ ಅಫೀಸರ್ ಅಗಿರುವ ಈತ ಸರ್ಕಾರಿ ಕಚೇರಿಯಲ್ಲಿ ಯುವತಿಯನ್ನು ಈ ರೀತಿ ಬಳಸಿಕೊಂಡಿರುವುದನ್ನು ಸಮತಾ ಸೈನಿಕ ದಳ ಖಂಡಿಸಿದೆ. ಪಿಡಿಓ ಅನಂತ ಪದ್ಮನಾಭ್ ನಾಯಕ್ ವಿರುದ್ದ ಜಿಲ್ಲಾ ಪಂಚಾಯತ್ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದೆ.