News

ತಮಿಳುನಾಡಿನಲ್ಲಿ ಕಾವೇರಿ ವಿವಾದ ಪ್ರತಿಭಟನೆ- ರೈಲು ಏರಿದ್ದ ವ್ಯಕ್ತಿಗೆ ತಗುಲಿದ ಬೆಂಕಿ

ಚೆನ್ನೈ ಏ 11 : ತಮಿಳುನಾಡಿನಲ್ಲಿ ನಡೆಯುತ್ತಿರುವ ಕಾವೇರಿ ನೀರಿನ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಭಟನೆಗಳು ನಡೆಯುತ್ತಿದ್ದು, ಈ ವೇಳೆ ಅನಾಹುತವೊಂದು ಸಂಭವಿಸಿದೆ. ಪ್ರತಿಭಟಿಸುತ್ತಾ ರೈಲು ಏರಿ ರೈಲುತಡೆ ಯತ್ನಿಸಿದ್ದ ವ್ಯಕ್ತಿಯೋರ್ವನಿಗೆ ವಿದ್ಯುತ್‌ ತಂತಿ ತಗುಲಿ ಹೊತ್ತಿ ಉರಿದಿದ್ದಾನೆ. ಇತನನ್ನು ಪಿಎಂಕೆ ಪಕ್ಷದ ಕಾರ್ಯಕರ್ತ ರಂಜಿತ್‌ (34) ಎಂದು ಗುರುತಿಸಲಾಗಿದೆ. ತೀವ್ರವಾದ ಸುಟ್ಟ ಗಾಯಗಳಿಂದ ಬಳಲುತ್ತಿರುವ ಅವರನ್ನು ಉಳಿದ ಪ್ರತಿಭಟನಕಾರರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರಂಜಿತ್‌ ಹಾಗೂ ಮತ್ತೋರ್ವ ವ್ಯಕ್ತಿ ಗುರುವಾಯೂರು ಎಕ್ಸ್‌ಪ್ರೆಸ್‌ ರೈಲು ಹತ್ತಿ ತಡೆಯಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭ ವಿದ್ಯುತ್‌ ತಂತಿ ತಾಗಿ ರಂಜಿತ್‌ ಹೊತ್ತಿ ಉರಿದಿದ್ದಾನೆ. ರಂಜಿತ್‌ ಜೊತೆಗಿದ್ದ ಮತ್ತೋರ್ವನಿಗೂ ಬೆಂಕಿ ತಗುಲಿದೆ. ಈ ಭೀಕರ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಅದೃಷ್ಟವಶಾತ್‌ ರಂಜಿತ್‌ ಹಾಗೂ ಮತ್ತೋರ್ವ ಕೂಡ ಸಾವಿನಿಂದ ಪಾರಾಗಿದ್ದರು ಸ್ಥಿತಿ ಗಂಭೀರವಾಗಿದೆ.