News

ಮಂಗಳೂರು: ನಾನು ಪ್ರಧಾನಿ ಮೋದಿಯ ಪ್ರತಿಸ್ಪರ್ಧಿ - ಹುಚ್ಚಾ ವೆಂಕಟ್

ಮಂಗಳೂರು, ಏ 11: ನಾನು ಪ್ರಧಾನಿ ಹುದ್ದೆಗೇರುವ ಆಕಾಂಕ್ಷಿಯಾಗಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮತ ಹಾಕುವಂತೆ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಲ್ಲ, ಡ್ರಿಂಕ್ಸ್, ಸೀರೆ ಹಂಚಲ್ಲ . ಒಂದು ವೇಳೆ ಸೋತರು ಬೇಜಾರು ಇಲ್ಲ .ಆದರೆ ನನ್ನ ಸೋಲು ಜನರ ಸೋಲು. ಇಲ್ಲಿ ಸೋತರೂ ಎಂಪಿ ಚುನಾವಣೆಗೆ ನಿಲ್ಲುತ್ತೇನೆ. ಪ್ರಧಾನಿಯಾಗುತ್ತೇನೆ ಎಂದು ಅವರು ಹೇಳಿದರು. 


ಒಂದು ವೇಳೆ ನಾನು ಸಿಎಂ ಆದರೆ ಐಟಂ ಡ್ಯಾನ್ಸರ್ ಗಳನ್ನ ಗುಂಡಿಕ್ಕಿ ಕೊಲ್ಲುತ್ತೇನೆ. ಐಟಂ ಸಾಂಗ್ ಬ್ಯಾನ್ ಮಾಡುತ್ತೇನೆ. ಹುಡುಗಿಯರು ಲಂಗ ದಾವಣಿ ಹಾಕಲು ಆದೇಶಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಸಮಯದ ಅಭಾವದಿಂದ ಹುಚ್ಚ ವೆಂಕಟ್ ಪಾರ್ಟಿ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ನಾನು ಮೋದಿಯವರಿಗೆ ಪ್ರತಿಸ್ಪರ್ಧಿ ಎಂದು ಹೇಳಿದರು.
ಕರಾವಳಿಯ ಮೀನುಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕರಾವಳಿಯ ಮೀನುಗಾರರು ಬಹಳಷ್ಟು ಸಮಸ್ಯೆಯಲ್ಲಿದ್ದಾರೆ. ಮೀನು ತಿನ್ನುವ ಒಂದು ವರ್ಗಕ್ಕಾಗಿ ಮೀನುಗಾರರು ತಮ್ಮ ಪ್ರಾಣವನ್ನು ಒತ್ತೆ ಇಡುವಂತಾಗಿದೆ. ಮೀನುಗಾರರು ತಮ್ಮ ವೃತ್ತಿ ತೊರೆದು ಕೃಷಿ ಮಾಡಿ ಎಂದು ಅವರು ಸಲಹೆ ನೀಡಿದರು.