News

ಸಾಡೇ ಸಾಥ್ ಶನಿಕಾಟದಿಂದ ಸಿದ್ದರಾಮಯ್ಯಗೆ ಸೋಲು ಖಚಿತ - ಶಾಸಕ ಶರವಣ

ಏ ,11: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಾರಿ ಸೋಲು ಖಚಿತ ಎಂದು ಜೆಡಿಎಸ್‌ ಶಾಸಕ ಶರವಣ ಭವಿಷ್ಯ ನುಡಿದಿದ್ದಾರೆ. ತುಮಕೂರಿನ ಮಧುಗಿರಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತಕವನ್ನು ಜಾಲಾಡಿದ್ದಾರೆ. ಸಿದ್ದರಾಮಯ್ಯ ಅವರು ಅನುರಾಧ ನಕ್ಷತ್ರ ,ವೃಶ್ಚಿಕ ರಾಶಿಯಲ್ಲಿ ಹುಟ್ಟಿದ್ದಾರೆ. ಅವರಿಗೆ ಸಾಡೇ ಸಾಥ್ ಶನಿಕಾಟ ನಡೆಯುತ್ತಿದೆ.ಸಿದ್ದರಾಮಯ್ಯ ಸಿಎಂ ಆಗಿ ಪದವಿ ಸ್ವೀಕರಿಸುವಾಗ ಶನಿ ದೆಸೆ ಶುರುವಾಗಿತ್ತು. ಇದು‌ ಅವರ ಕೊನೆ ಭಾಗದ ಶನಿಕಾಟ ಹೀಗಾಗಿ ಚಾಮುಂಡೇಶ್ವರಿಯಲ್ಲಿ ಜನರು ಅವರಿಗೆ ಸೋಲಿನ ಭಾಗ್ಯ ನೀಡುತ್ತಾರೆ ಎಂದು ಹೇಳಿದ್ದಾರೆ. ಶನಿಯೇ ಸಿಎಂ ಬಾಯಲ್ಲಿ ದುರಹಂಕಾರದ ಮಾತುಗಳನ್ನಾಡಿಸುತ್ತಿದ್ದಾನೆ ಎಂದರು.

ಸಿದ್ದರಾಮಯ್ಯ ಅವರ ಹುಟ್ಟಿನ ದಿನ ಅವರಿಗೇ ಗೊತ್ತಿಲ್ಲ, ಅವರ ಹೆಸರಿನ ಮೇಲೆ ನೋಡಿದ್ದೇನೆ. ಕುಮಾರಸ್ವಾಮಿ ಅವರು ಈ ಬಾರಿ ಮುಖ್ಯಮಂತ್ರಿ ಆಗುತ್ತಾರೆ. ಅವರ ಜಾತಕ ಚೆನ್ನಾಗಿದೆ ಎಂದು ಕುಮಾರ ಸ್ವಾಮಿಯ ಭವಿಷ್ಯವನ್ನೂ ನುಡಿದರು.