News

ಕೊಣಾಜೆ : ಕ್ಷುಲಕ ಕಾರಣಕ್ಕೆ ಯುವಕನಿಗೆ ಚೂರಿ ಇರಿತ

ಮಂಗಳೂರು, ಏ 11 : ಯುವಕನೊಬ್ಬನಿಗೆ ಕ್ಷುಲಕ ಕಾರಣಕ್ಕೆ ಚೂರಿ ಇರಿದ ಘಟನೆ ನಗರದ ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ನಾಟೆಕಲ್ ನಲ್ಲಿ ನಡೆದಿದೆ. ಸ್ನೇಹಿತನ ಪುತ್ರನಿಗೆ ಹಲ್ಲೆ ನಡೆಸಿದ ವಿಚಾರದಲ್ಲಿ ಪ್ರಶ್ನಿಸಿದ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ. ಚೂರಿ ಇರಿತಕ್ಕೆ ಒಳಗಾದ ಯುವಕನನ್ನು ಕಿನ್ಯ ಹಿದಾಯತ್ ನಗರದ ಮಹಮ್ಮದ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಏ 10ರ ಮಂಗಳವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ನಾಟೆಕಲ್ ನಿವಾಸಿ ಅಜ್ಮಲ್ ಎಂಬಾತ ಚೂರಿ ಇರಿದ ಆರೋಪಿಯಾಗಿದ್ದಾನೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿ ಅಜ್ಮಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.