News

ತೆಕ್ಕಟ್ಟೆ: ನಿಂತಿದ್ದ ಟಿಪ್ಪರ್ ಗೆ ಹಣ ಸಾಗಾಟದ ವಾಹನ ಡಿಕ್ಕಿ- ಇಬ್ಬರು ಗಂಭೀರ


ಕುಂದಾಪುರ, ಮಾ 13 : ಹೆದ್ದಾರಿಯಲ್ಲಿ ನಿಂತಿದ್ದ ಟಿಪ್ಪರ್ ಗೆ ಹಣ ಸಾಗಾಟದ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಮಾ 12 ರಂದು ಇಲ್ಲಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಹಣ ಸಾಗಾಟದ ವಾಹನದಲ್ಲಿದ್ದ ಕುಂದಾಪುರದ ಬಸ್ರೂರು ಮೂಲದ ರಾಘವೇಂದ್ರ ಹಾಗೂ ರಾಜೇಶ್ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ರಾಜೇಶ್‌ಗೆ ಕೈ ಕಾಲು, ಹೊಟ್ಟೆ ಹಾಗೂ ತಲೆ ಭಾಗಕ್ಕೆ ತೀವ್ರ ಗಾಯಗಳಾಗಿವೆ.


ಮರಳು ತುಂಬಿದ್ದ ಟಿಪ್ಪರ್ ವಾಹನ ತೆಕ್ಕಟ್ಟೆ ಹೆದ್ದಾರಿಯಲ್ಲಿ ನಿಂತಿದ್ದು, ಈ ಸಂದರ್ಭ ಕೋಟ ಕಡೆಯಿಂದ ಸಾಗಿ ಬಂದ ಹಣ ಸಾಗಾಟದ ವಾಹನ ಟಿಪ್ಪರ್‌ಗೆ ಡಿಕ್ಕಿಯಾಗಿತ್ತು. ಅಪಘಾತದ ತೀವ್ರತೆಗೆ ಹಣ ಸಾಗಾಟದ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪರಿಣಾಮ ಚಾಲಕ ರಾಘವೇಂದ್ರ ಹಾಗೂ ಸಿಬ್ಬಂದಿ ರಾಜೇಶ್ ವಾಹನದೊಳಗೆ ಸಿಲುಕಿದ್ದರು. ಸ್ಥಳೀಯರು ಸತತ ಕಾರ್ಯಾಚರಣೆ ನಡೆದಿ ಇಬ್ಬರನ್ನೂ ವಾಹನದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.  ಟಿಪ್ಪರ್ ಚಾಲಕ ಪಾಂಡು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಕೋಟ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.