News

ಮಂಗಳೂರು: ಪಬ್ ದಾಳಿ ಪ್ರಕರಣ , ಬಿಜೆಪಿಯ ಷಡ್ಯಂತ್ರಕ್ಕೆ ನಾನು ಬಲಿಯಾದೆ - ಪ್ರಮೋದ್ ಮುತಾಲಿಕ್

ಮಂಗಳೂರು, ಮಾ 12: ಬಿಜೆಪಿಯ ಷಡ್ಯಂತ್ರದಿಂದಾಗಿ ನಾನು 16 ದಿನ ಜೈಲಿನಲ್ಲಿ ಹಾಗೂ 9 ವರ್ಷಗಳ ಕಾಲ ಕೋರ್ಟ್ ಗೆ ಅಲೆದಾಡಬೇಕಾದ ಪರಿಸ್ಥಿತಿ ಬಂದೊಂದಗಿತ್ತು ಎಂದು ಶ್ರೀ ರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಪಬ್ ದಾಳಿ ಪ್ರಕರಣದ ತೀರ್ಪು ಹೊರಬಂದ ಬಳಿಕ ನಗರದ ಆರ್ಯಸಮಾಜದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು , ನಾನು ನಿರಪರಾಧಿಯಾಗಿದ್ದು, ಘಟನೆ ನಡೆದ ಸಂದರ್ಭ ನಾನು ಮಹಾರಾಷ್ಟ್ರದ ಪುಣೆಯಲ್ಲಿದೆ. ಒಂದು ವೇಳೆ ಬಿಜೆಪಿ , ಕಾಂಗ್ರೇಸ್ ಕಾರ್ಯಕರ್ತರು ಗಲಾಟೆ ಮಾಡಿದರೆಂದು ಸಿದ್ದರಾಮಯ್ಯ ಅಥವಾ ಯಡಿಯೂರಪ್ಪನನ್ನು ಬಂಧಿಸುತ್ತಾರೆಯೇ..? ಎಂದು ಪ್ರಶ್ನಿಸಿದರು. ಘಟನೆ ನಡೆದ ಬಳಿಕ ಸುಖಾ ಸುಮ್ಮನೆ ನನ್ನನ್ನು ಬಂಧಿಸಿದ ಪರಿಣಾಮ ನಾನು ಮಾನಸಿಕವಾಗಿ ಬಹಳ ನೊಂದಿದ್ದೇನೆ. ಆರ್ಥಿಕವಾಗಿಯೂ ನಷ್ಟ ಅನುಭವಿಸಿದ್ದೇನೆ. ಆದರೆ ಇದೀಗ ಸತ್ಯಕ್ಕೆ ಜಯ ದೊರಕಿದೆ ಎಂದು ಹೇಳಿದರು.

ಘಟನೆಯ ಬಳಿಕ ಯಾರೊಬ್ಬರು ದೂರು ದಾಖಲಿಸದಿದ್ದರೂ, ಬಳಿಕ ನನ್ನನ್ನು ಬಂಧಿಸಲಾಯಿತು. ನಾನು ಅನುಭವಿಸದ ಮಾನಸಿಕ ಕಿರುಕುಳದ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವ ಯೋಚನೆಯಲ್ಲಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ ಕೋರ್ಟ್ ತೀರ್ಪಿನಿಂದ ಸಂತೋಷವಾಗಿದ್ದು, ಇದು ಸತ್ಯದ ದೊರೆತ ಜಯವಾಗಿದೆ. ಭಾರತೀಯ ಸಂಸ್ಕೃತಿಯನ್ನು ಉಳಿವಾಗಿ ಹೋರಾಡುವ ಸಂಘಟನೆಗೆ ಈ ತೀರ್ಪು ಹುರುಪು ತುಂಬಿದೆ. ಇನ್ಮುಂದೆ ಕೂಡಾ ವಿದೇಶಿ ಸಂಸ್ಕೃತಿಯ ಪಬ್, ಬಾರ್, ದಾಳಿ ಮುಂದುವರಿಯಲಿದ್ದೂ ದಾಳಿಯ ರೀತಿ ಕಾನೂನಾತ್ಮಕವಾಗಿ ಹೋರಾಟವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು