News

ಉಡುಪಿ: ಶ್ರೀಗಳು ನನ್ನನ್ನು ಹೊಗಳಿ ಹೊಗಳಿ ಏನು ಮಾಡುತ್ತಾರೋ ಹೇಳಲಾಗದು- ಪ್ರಮೋದ್ ಮಧ್ವರಾಜ್

ಉಡುಪಿ, ಮಾ 12 : ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀ ಪಾದರು ನನ್ನನು ಹೊಗಳುತ್ತಿದ್ದಾರೆ. ಆದರೆ ನನ್ನನ್ನು ಹೊಗಳಿ ಹೊಗಳಿ ಏನು ಮಾಡುತ್ತಾರೆಂದು ಹೇಳಲಾಗದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಶ್ರೀಗಳು ರಾಜಕೀಯ ಪ್ರವೇಶ ಮಾಡುವ ಬಗ್ಗೆ ನನಗೆ ಒಂದು ಚೂರು ಸುಳಿವು ಇರಲಿಲ್ಲ ,ಅವರು ನನ್ನ ಬಗ್ಗೆ ಹೊಗಳಿ ಒಳ್ಳೆಯ ಮಾತುಗಳನ್ನು ಆಡಿರುವುದಕ್ಕೆ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ .ನನಗೂ ಅವರ ಬಗ್ಗೆ ಅಪಾರ ಗೌರವವಿದೆ ಎಂದರು.

ಶ್ರೀಗಳ ರಾಜಕೀಯ ಪ್ರವೇಶದ ವಿಚಾರ ತಿಳಿದು ನಾನು ಅವರೊಂದಿಗೆ ಪೋನ್ ನಲ್ಲಿ ಸಂಭಾಷಣೆ ನಡೆಸಿದ್ದೇನೆ. ಅವರು ದೇವರ ಪ್ರೇರಣೆಯಂತೆ ನಡೆದುಕೊಂಡಿದ್ದಾರಂತೆ. ಕಳೆದ ಚುನಾವಣೆಯಲ್ಲಿ ನನ್ನ ಪರ ಪ್ರಚಾರ ಮಾಡಿದ್ದರು. ನನ್ನೊಂದಿಗಿದ್ದವರನ್ನು ನನ್ನ ವಿರುದ್ದ ಸ್ಪರ್ಧಿಸಲು ಪ್ರೇರೇಪಿಸುವಷ್ಟು ಮೂರ್ಖ ನಾನಲ್ಲ, ಚುನಾವಣೆಯಲ್ಲಿ ಜನರ ತೀರ್ಮಾನಕ್ಕೆ ನಾನು ತಲೆಬಾಗಬೇಕಾಗುತ್ತದೆ ಎಂದರು.