News

ಸಿದ್ದ ’ರಾಮ’ಯ್ಯ ಅಲ್ಲ ಸಿದ್ದ ’ರಾವಣ’ಯ್ಯ- ಪ್ರತಾಪ್ ಸಿಂಹ

ಮಾ 11: ಮೈಸೂರು ಮಹಾರಾಜರು ಬಿಟ್ಟರೆ ನಾನೇ ಹೆಚ್ಚು ಅನುದಾನ ನೀಡಿದ್ದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ರಾವಣನ ಗುಣಗಳು ಕಾಣಸಿಗುತ್ತದೆ. ರಾವಣನಿಗೆ ಈ ಸಾಮ್ರಾಜ್ಯ ನನ್ನದು , ಎಲ್ಲವೂ ನನ್ನಿಂದಲೇ, ನಾನು ಎನ್ನುವ ದುರಂಹಕಾರ ಇತ್ತು , ಅದೇ ರೀತಿಯ ಮಾತುಗಳನ್ನು ಸಿದ್ದರಾಮಯ್ಯನವರೂ ಆಡುತ್ತಿದ್ದಾರೆ. ಆದ್ದರಿಂದ ಅವರು ಸಿದ್ದರಾಮಯ್ಯ ಅನ್ನುವ ಹೆಸರಿನಲ್ಲಿ ರಾಮ ಹೆಸರನ್ನು ಬಿಟ್ಟು ರಾವಣನ ಹೆಸರು ಇಟ್ಟುಕೊಳ್ಳಲಿ ಎಂದರು ಅಲ್ಲದೆ ಸಿದ್ದರಾಮಯ್ಯನ ಲಂಕಾ ರಾಜ್ಯ ಇನ್ನೆರಡು ತಿಂಗಳಲ್ಲಿ ಭಸ್ಮವಾಗಲಿದೆ ಎಂದು ಭವಿಷ್ಯ ನುಡಿದರು.

ಮೈಸೂರಿಗೆ ಮಹಾರಾಜರು ನೀಡಿದ ಕೊಡುಗೆ ಅನನ್ಯ.ಮೈಸೂರು ಮಹಾರಾಜರು ಅಭಿವೃದ್ಧಿ ಮಾಡಿದ ರೀತಿ ಮೈಸೂರನ್ನು ಯಾರು ಮಾಡಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ, ಸಿದ್ದರಾಮಯ್ಯ ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತಿದ್ದಾರೆ. ಮುಂದಿನ‌ ದಿನಗಳನ್ನು ಏನಾಗಲಿದೆ ನೋಡೋಣ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಈ ಹಿಂದೆಯೆಲ್ಲಾ ದೇವರಾಜ ಅರಸು ಜೊತೆಗೆ ಹೋಲಿಕೆ ಮಾಡಿಕೊಳ್ಳುತ್ತಿದ್ದರು. ಈಗ ಅದನ್ನು ಬದಲಾವಣೆ ಮಾಡಲು ಮಹರಾಜರ ಜೊತೆ ಹೋಲಿಕೆ ಮಾಡಲು ಮುಂದಾಗಿದ್ದಾರೆ. ಇದು ನಿಜಕ್ಕೂ ನಗೆಪಾಟಲಿನ ವಿಚಾರ ಎಂದು ವ್ಯಂಗ್ಯವಾಡಿದರು.