News

ಬೆಳ್ತಂಗಡಿ: ಅನಿಲ ಟ್ಯಾಂಕರ್ ಸೋರಿಕೆ - ಆತಂಕಗೊಂಡ ಜನತೆ

ಬೆಳ್ತಂಗಡಿ, ಮಾ 9: ಇಲ್ಲಿನ ಕುವೆಟ್ಟು ಗ್ರಾಮದ ಮದ್ದಡ್ಕ ಸಮೀಪದ ಕಾಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಿಲ ಟ್ಯಾಂಕರ್ ಸೋರಿಕೆಯಾಗಿರುವ ಘಟನೆ ನಡೆದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿಸಿದ್ದಾರೆ. ಅನಿಲ ಸೋರಿಕೆ ಉಂಟಾಗಿ ಸ್ಥಳದಲ್ಲಿ ಭೀತಿಯ ವಾತಾವರಣ ಉಂಟಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವುಂಟಾಗಿದೆ.