News

ಉಡುಪಿ, ಮಂಗಳೂರು ಸೇರಿ ರಾಜ್ಯದ ಹಲವೆಡೆ ಎಸಿಬಿ ದಾಳಿ

ಮಂಗಳೂರು, ಮಾ 09: ಎಸಿಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರದ ಅರೋಪ ಕೇಳಿ ಬಂದ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಭ್ರಷ್ಟಚಾರ ಅಧಿಕಾರಿಗಳ ದಾಳಿಯ ಬಿಸಿ, ಉಡುಪಿ, ಮಂಗಳೂರಿಗೂ ತಟ್ಟಿದ್ದು ಉಪ ಅಧೀಕ್ಷಕ ಅಬಕಾರಿ ಉಡುಪಿ ಮತ್ತು ಮಂಗಳೂರಿನ ಪ್ರಭಾರ ಅಧೀಕ್ಷರಾದ ವಿನೋದ್ ಕುಮಾರ್ ಅವರ ಮನೆ ಹಾಗೂ ಕಚೇರಿಯ ಮೇಲೂ ದಾಳಿ ನಡೆದಿದೆ.

ಮಂಗಳೂರಿನ ಕುಂಟಿಕಾನ ಮನೆ ಹಾಗೂ ಕಛೇರಿ , ಚಾಲಕನ ನಿವಾಸದ ಮೇಲೆ ಎಸಿಬಿ ಎಸ್ಪಿ ಶೃತಿ ಅವರ ನೇತೃತ್ವದಲ್ಲಿ ಬೆಳಿಗ್ಗೆ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.
ಇವಲ್ಲದೆ ಧಾರವಾಡ, ಬೆಳಗಾವಿ ಗಂಗಾವತಿ ಸೇರಿದಂತೆ 6 ಕಡೆ ದಾಳಿ ನಡೆದಿದ್ದು ಎಲ್ಲೆಡೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.