News

’ಧ್ವಂಸ ರಾಜಕಾರಣ’- ಕಣ್ಣೂರಿನಲ್ಲೂ ರಾಷ್ಟ್ರಪಿತ ಗಾಂಧಿ ಪ್ರತಿಮೆ ಧ್ವಂಸ

ಕಾಸರಗೋಡು, ಮಾ 08 : ಕಣ್ಣೂರಿನ ತಳಿಪರಂಬದಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸುವ ಘಟನೆ ಮಾ ೮ ರ ಗುರುವಾರ ಬೆಳಿಗ್ಗೆ ನಡೆದಿದೆ. ತಳಿಪರಂಬ ತಾಲೂಕು ಕಚೇರಿ ಸಮೀಪದ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಹಾನಿಗೊಳಿಸಲಾಗಿದೆ. ಪ್ರತಿಮೆಗೆ ಅಳವಡಿಸಲಾಗಿದ್ದ ಕನ್ನಡಕ , ಮಾಲೆಯನ್ನು ಕಿತ್ತೆಸೆಯಲಾಗಿದೆ . ಬಳಿಕ ಪ್ರತಿಮೆಗೆ ಬಡಿದು ಧ್ವಂಸ ಗೊಳಿಸಲು ಯತ್ನಿಸಲಾಗಿದೆ. ಬೆಳಿಗ್ಗೆ 8.30 ರ ಸುಮಾರಿಗೆ ಕೃತ್ಯ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 

ತ್ರಿಪುರದಲ್ಲಿ ಲೆನಿನ್ ಪ್ರತಿಮೆ ಧ್ವಂಸದಿಂದ ಶುರುವಾದ ಸರಣಿ ದೇಶವ್ಯಾಪ್ತಿ ಹಬ್ಬಿದ್ದು, ತಮಿಳುನಾಡು ಮೊದಲಾದೆಡೆ ಪ್ರತಿಮೆಗಳನ್ನು ಧ್ವಂಸ ಗೊಳಿಸುವ ಸರಣಿ ಕೃತ್ಯಗಳು ನಡೆಯುತ್ತಿದ್ದು , ಕಣ್ಣೂರಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಪ್ರತಿಮೆ ಧ್ವಂಸಕ್ಕೆ ಯತ್ನಿಸಲಾಗಿದ್ದು , ಅನೇಕರು ಕೃತ್ಯ ಖಂಡಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಗಳನ್ನು ತೆಗೆದುಕೊಂಡಿದ್ದಾರೆ .