News

ಪಿಕ್ಕಾಸಿನಿಂದ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ- ಶಿಕ್ಷಕ ಸಾವು

ಕಾಸರಗೋಡು, ಮಾ  07 : ಶಿಕ್ಷಕರೋರ್ವರಿಗೆ ತಂಡವೊಂದು ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆಗೈದ ಘಟನೆ ಚೀಮೇನಿ ಪೊಲೀಸ್ ಠಾಣೆಯ ವ್ಯಾಪ್ತಿ ಕಯ್ಯೂರು ಎಂಬಲ್ಲಿ ನಡೆದಿದೆ. 

ಕೊಲೆಗೀಡಾದವರನ್ನು ಕಯ್ಯೂರು ಆಲಂತಟ್ಟ ದ ಪಿ.ಟಿ. ರಮೇಶ್ (52) ಎಂದು ಗುರುತಿಸಲಾಗಿದೆ .
ಇವರು ನಾಲಿಲಾಂಕಡಂ ಸರಕಾರಿ ಪಿ.ಯು ಶಾಲೆಯ ಶಿಕ್ಷಕರಾಗಿದ್ದರು. ಮಾರ್ಚ್ ೩ರಂದು ರಾತ್ರಿ 10.30ರ ವೇಳೆಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ನಾಲ್ವರು ಪಿಕ್ಕಾಸಿನಿಂದ ಹಲ್ಲೆ ನಡೆಸಿದ್ದು , ಗಂಭೀರ ಗಾಯಗೊಂಡ ರಮೇಶ್ ರನ್ನು ಅವರನ್ನು ತಕ್ಶಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ ಚಿಕಿತ್ಸೆಗೆ ಫಲಕಾರಿಯಾಗದೆ ಮಾ 7 ರ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ನಾಲ್ವರ ವಿರುದ್ಧ ಚೀಮೇನಿ ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯೇಶ್, ತಂಬಾನ್, ಅಭಿಜಿತ್ ಮತ್ತು ಅರುಣ್ ಕೃತ್ಯದಲ್ಲಿ ಶಾಮೀಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿವಾದವೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.