News

ನಾನು ಪ್ರಮಾಣಿಕವಾಗಿ ತೆರಿಗೆ ಕಟ್ಟಿದ್ದೇನೆ, ಐಟಿ ದಾಳಿಯ ಅಸ್ತ್ರಕ್ಕೆ ನಾನ್ ಹೆದರಲ್ಲ - ಪ್ರಮೋದ್ ಮಧ್ವರಾಜ್

ಉಡುಪಿ, ಫೆ 13: ನಾನು ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದ್ದೇನೆ ಹಾಗು ದೇಶದ ಕಾನೂನಿನಂತೆ ನಡೆದುಕೊಂಡಿದ್ದೇನೆ. ಹೀಗಾಗಿ ನಾನು ಯಾರಿಗೂ ಕೂಡಾ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಮಲ್ಪೆ ಮತ್ಸೋದ್ಯಮಿಗಳ ಮೇಲೆ ನಡೆದ ಐಟಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಯಲ್ಲಿ ಯಾರಿಂದ ಕೂಡಾ ನಾನು ಹಣ ಪಡೆದಿಲ್ಲ. ಫಂಡಿಂಗ್ ಮಾಡಿದ ಹಣವನ್ನು ಕೂಡಾ ತೆಗೆದುಕೊಂಡಿಲ್ಲ. ಹೀಗಾಗಿ ಐಟಿ ದಾಳಿಯ ಅಸ್ತ್ರಕ್ಕೆ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ನಾನು ಹೆದರೋದಾದ್ರೆ ಈ ಜಗತ್ತಿನಲ್ಲಿ ಭಗವಂತನಿಗೆ ಮಾತ್ರ ಎಂದು ಐಟಿ ದಾಳಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ನೀಡಿದ್ದಾರೆ.