News

ಬಂಟ್ವಾಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಕಂಟೈನರ್ ಲಾರಿ ಪಲ್ಟಿ – ಒಂದು ಎತ್ತು ಸ್ಥಳದಲ್ಲೇ ಸಾವು

ಬಂಟ್ವಾಳ, ಫೆ 12: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಕಂಟೈನರ್ ಲಾರಿಯೊಂದು ಉರುಳಿಬಿದ್ದ ಘಟನೆ ಬಂಟ್ವಾಳದ ವಗ್ಗ ಸಮೀಪದ ಅಂಚಿಕಟ್ಟೆಯಲ್ಲಿ ನಡೆದಿದೆ.

ಇಂದು ಬೆಳಗ್ಗಿನ ಜಾವ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ ವಗ್ಗ ಸಮೀಪ ಉರುಳಿ ಬಿದ್ದಿದ್ದು, ಕಂಟೈನರ್ ತೆರೆದು ನೋಡಿದಾಗ ಅದರೊಳಗೆ 9 ಎತ್ತು ಮತ್ತು 5 ಎಮ್ಮೆ ಪತ್ತೆಯಾಗಿದೆ.

ಕಂಟೈನರ್ ಲಾರಿ ಪಲ್ಟಿಯಾದ ಪರಿಣಾಮ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ. ಅಪಘಾತವಾಗುತ್ತಿದ್ದಂತೇ ಚಾಲಕ ಸೇರಿದಂತೆ ಲಾರಿಯಲ್ಲಿದ್ದವರು ಪರಾರಿಯಾಗಿದ್ದಾರೆ. ಘಟನೆ ಕುರಿತಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.