News

ಕಟಪಾಡಿ : ಹಾರೆಯಿಂದ ಬಡಿದು ಕೊಲೆ


ಕಾಪು, ಫೆ 11: ಹಾರೆಯಿಂದ ಹೊಡೆದು ವ್ಯಕ್ತಿಯೊಬ್ಬರನ್ನು ಕೊಲೆಗೈದಿರುವ ಘಟನೆ ಕಾಪುವಿನ ಕಟಪಾಡಿ ಸಮೀಪದ ಅಚ್ಚಡ ಕ್ರಾಸ್ ಬಳಿ ನಡೆದಿದೆ. ಫೆ, 11ರ  ಬೆಳಗ್ಗೆ ಮರಳಿನ ರಾಶಿಯಲ್ಲಿ ಇವರ ಮೃತದೇಹ ಬಿದ್ದಿರುವುದು ಪತ್ತೆಯಾಗಿದೆ. ಮೃತರನ್ನು ಉತ್ತರ ಭಾರತ ಮೂಲದ ಕಾರ್ಮಿಕ ಎಂದು ಗುರುತಿಸಲಾಗಿದೆ.ಮೃತ ವ್ಯಕ್ತಿ ಸಮೀಪದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರೆನ್ನಲಾಗಿದೆ. ಮೃತದೇಹದ ಕೈಯಲ್ಲಿ ಮೊಸರಿನ ಪ್ಯಾಕೆಟ್ ಕಂಡುಬಂದಿದ್ದು ರಾತ್ರಿ ಊಟಕ್ಕಾಗಿ ತಂದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.