News

ಮಂಗಳೂರು: ಒಳಚರಂಡಿ ಕಾಮಗಾರಿಯ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು

ಮಂಗಳೂರು, ಫೆ 11: ಕಾಟಿಪಳ್ಳ ಕೃಷ್ಣಪುರದಲ್ಲಿ ಫೆ.10 ರ ಶನಿವಾರ ರಾತ್ರಿ ಒಳಚರಂಡಿ ಕಾಮಗಾರಿಯ ಹೊಂಡಕ್ಕೆ ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿದ ಘಟನೆ ನಡೆದಿದೆ. ಮೃತರನ್ನು ಕಾಟಿಪಳ್ಳ ೧ ನೇ ಬ್ಲಾಕ್ ನ ಗಣೇಶ್ ಕೃಪಾ ನಿವಾಸಿ ಮೋಹನ್ (35) ಎಂದು ಗುರುತಿಸಲಾಗಿದೆ. ಫೆ 10 ರ ಶನಿವಾರ ರಾತ್ರಿ ಮೋಹನ್ ಆಕಸ್ಮಿಕವಾಗಿ ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೋಹನ್ ಮೃತಪಟ್ಟಿದ್ದಾರೆ.

ಇನ್ನು ಮೋಹನ್ ಸಾವಿಗೆ ಒಳಚರಂಡಿ ಕಾಮಗಾರಿ ಗುತ್ತಿಗೆದಾರನ ಬೇಜವಾಬ್ದಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ ಶಾಸಕ ಮೊಹಿದ್ದೀನ್ ಬಾವ ಮೃತ ಕುಟುಂಬಕ್ಕೆ ಸ್ವಾಂತನ ಹೇಳಿದ್ದಾರೆ. ಬಳಿಕ ದೂರವಾಣಿ ಕರೆ ಮಾಡಿ ಗುತ್ತಿಗೆದಾರನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಘಟನೆ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.