News

200 ಕ್ಕೂ ಹೆಚ್ಚು ಬಸ್ಸು ರಾಹುಲ್ ಗಾಂಧಿ ಸಮಾವೇಶಕ್ಕೆ- ಸಾರ್ವಜನಿಕರ ಪರದಾಟ


ಧಾರವಾಡ, ಫೆ 10: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮದ್ಯಾಹ್ನ 1.30ಕ್ಕೆ ನಡೆಯುವ ಪಕ್ಷದ ಪ್ರಚಾರ ಕಾರ್ಯಕ್ಕಾಗಿ ಕೊಪ್ಪಳ ಹಾಗೂ ಹೊಸಪೇಟೆಗೆ ಆಗಮಿಸುವ ಹಿನ್ನಲೆಯಲ್ಲಿ ಬಸ್ ಸಂಚಾರದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಯವಾಗಿದೆ. ಸಮಾವೇಶಕ್ಕೆ ಜನರನ್ನು ಕರೆತರಲು ನೂರಾರು ಬಸ್ ಗಳನ್ನ ಬಳಕೆ ಮಾಡಿರುವುದು ಈ ಭಾರೀ ಪ್ರಮಾಣದ ವ್ಯತ್ಯಯಕ್ಕೆ ಕಾರಣ. ರಾಹುಲ್ ಭಾಗವಹಿಸುವ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಹುಬ್ಬಳ್ಳಿಯ ವಿಭಾಗದಿಂದಲೇ 200 ಬಸ್ ಗಳು ಹೊರಟಿದ್ದು, ಇದರಿಂದಾಗಿ ಕೊಪ್ಪಳ ಮತ್ತು ಧಾರವಾಡ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.
ಇನ್ನು ಬಸ್ಸು ವ್ಯತ್ಯಯಕ್ಕೆ ಕ್ಷಮೆ ಕೋರಿ ಸಂಚಾರದಲ್ಲಿ ವ್ಯತ್ಯಯ ಆಗುತ್ತದೆ ಎಂದು ಅಧಿಕಾರಿಗಳು ಬಿತ್ತಿ ಪತ್ರ ಅಂಟಿಸಿದ್ದಾರೆ. ಬಸ್ ಇಲ್ಲದೇ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಟುತ್ತಿದ್ದು , ಹಿಡಿಶಾಪ ಹಾಕಿದ್ದಾರೆ.