News

ಹಿಂದೂ ಧಾರ್ಮಿಕ ಸಂಸ್ಥೆಗಳು ಸರ್ಕಾರದ ಕೈವಶ - ವಿಶ್ವ ಹಿಂದೂ ಪರಿಷತ್ ನಿಂದ ತೀವ್ರ ವಿರೋಧ

ಮಂಗಳೂರು, ಫೆ 08 : ಮಠ- ಮಂದಿರ ಮುಂತಾದ ಧಾರ್ಮಿಕ ಸಂಸ್ಥೆಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿಸುವ ಸರ್ಕಾರದ ಯೋಚನೆ ವಿರುದ್ದ ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ನಗರದ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ವಿ.ಹಿಂ.ಪ ಕಾರ್ಯಧ್ಯಕ್ಷ, ಎಂ.ಬಿ ಪುರಾಣಿಕ್ , ಅಲ್ಪಸಂಖ್ಯಾತರ ವಿರುದ್ದ ದಾಖಲಿಸಲಾದ ಮೊಕದ್ದಮೆಗಳನ್ನು ಹಿಂತೆಗೆಯುವಂತೆ ಅಘಾತಕಾರಿ ಸುತ್ತೋಲೆ ಸಿದ್ದರಾಮಯ್ಯ ಸರ್ಕಾರ ಹೊರಡಿಸಿದ ಬೆನ್ನಲ್ಲೇ ಇನ್ನೊಂದು ಅಘಾತಕಾರಿ ಪ್ರಹಾರ ಹಿಂದೂ ಸಮುದಾಯದ ಮೇಲೆ ಮಾಡಿದ್ದಾರೆ. ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ನಡುವೆ ತಾರತಮ್ಯ ತೋರುತ್ತಿರುವ ಸರ್ಕಾರ ಒಡೆದು ಆಳುವ ನೀತಿಯನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಅಲ್ಪ ಸಂಖ್ಯಾತ ಸಮುದಾಯದ ಕಿಡಿಗೇಡಿಗಳಿಗೆ ಇಂತಹ ಕಾಂಗ್ರೇಸ್ ಸರ್ಕಾರ ಮೃದು ದೋರಣೆ ಇನ್ನಷ್ಟು ಪುಷ್ಟಿ ನೀಡಲಿದೆ . ಹಿಂದುಗಳ ಮಾರಣ ಹೋಮಕ್ಕೆ ತುಪ್ಪ ಸೇರಿಸುವ ಈ ಸಿದ್ದರಾಮಯ್ಯ ಸರ್ಕಾರದ ನೀತಿ ಖಂಡನೀಯ ಎಂದರು . ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಮಸೀದಿ, ಚರ್ಚ್ ಗಳ ಬಗ್ಗೆ ಪ್ರಸ್ತಾಪಿಸಲು ಹೆದರುವ ಈ ಸರಕಾರ ಕೇವಲ ಹಿಂದೂಗಳ ಆರಾಧನಾ ಸ್ಥಳಗಳ ಬಗ್ಗೆ ತನ್ನ ನೀತಿಗಳನ್ನು ಹೇರಿ ಅಘಾತವನ್ನುಂಟುಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಪತ್ರಿಕಾಗೋಷ್ಟಿಯಲ್ಲಿ ಶರಣ್ ಪಂಪ್ ವೆಲ್, ವಿ.ಹಿಂ.ಪದ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್ ಮತ್ತು ಬುಜಂಗ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.