News

ನವದೆಹಲಿ: ಜನ ತಿರಸ್ಕರಿಸಿದವರಿಗೆ ಸುಳ್ಳೇ ಬಂಡವಾಳದಿಂದ ಜನರ ಹಾದಿ ತಪ್ಪಿಸುತ್ತಿದ್ದಾರೆ

ನವದೆಹಲಿ, ಜ 20(DaijiworldNews/SM): ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನರು ತಿರಸ್ಕರಿಸಿದ ಪಕ್ಷದವರು ದೇಶದಲ್ಲಿ ಸುಳ್ಳನ್ನೇ ಬಂಡವಾಳವಾಗಿಸಿಕೊಂಡು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿರೋಧ ಪಕ್ಷಗಳು ವದಂತಿಗಳು ಹರಡಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಭಾರತದ ಹಲವಾರು ಭಾಗಗಳಲ್ಲಿ ಸೇವೆ ಸಲ್ಲಿಸಲು ಬಿಜೆಪಿಗೆ ಅವಕಾಶಗಳು ದೊರೆತಿವೆ. ಅಲ್ಲದೆ ಅವರ ಕಾರ್ಯ ಹಾಗೂ ಶ್ರಮದಿಂದಾಗಿ ಸಂಸತ್ತಿನಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಲು ಸಾಧ್ಯವಾಗಿದೆ ಎಂದರು. ಅಮಿತ್ ಶಾ ಬಿಜೆಪಿಯನ್ನು ವಿಸ್ತರಿಸಿದರು ಮತ್ತು ಬಲಪಡಿಸಿದರು ಎಂದೂ ಪ್ರಧಾನಿ ಮೋದಿ ಬಣ್ಣಿಸಿದರು.