News

ಶಿರಸಿ: ಮರಕ್ಕೆ ಬೈಕ್ ಡಿಕ್ಕಿಯಾಗಿ ಪತ್ರಕರ್ತ ಸಾವು - ಕಸದ ವಾಹನದಲ್ಲಿ ಶವ ಸಾಗಾಟಕ್ಕೆ ವ್ಯಾಪಕ ಆಕ್ರೋಶ


ಶಿರಸಿ ಜ 14: ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಖಾಸಗಿ ವಾಹಿನಿಯಲ್ಲಿ ವರದಿಗಾರನಾಗಿ ಕೆಲಸಮಾಡುತ್ತಿದ್ದ ,ಮೌನೇಶ್ ಸಾವನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿ ಘಟನೆ ನಡೆದಿದೆ. ಮೌನೇಶ್ ಪೋತರಾಜ್ (28) ಮೃತ ದುರ್ದೈವಿ. ಜ 13 ರ ರಾತ್ರಿ ,ಶಿರಸಿಯಿಂದ ಸಂಕ್ರಾತಿ ಹಬ್ಬದ ನಿಮಿತ್ತ ಗದಗ ಜಿಲ್ಲೆಯ ಶಿರ ಹಟ್ಟಿ ತಾಲೂಕಿನ ಛಬ್ಬಿ ಗ್ರಾಮಕ್ಕೆ ತೆರಳುತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ತಿರುವಿನಿಂದ ಕೂಡಿದ ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ರಸ್ತೆ ಕಾಣದಾಗಿ ಈ ಘಟನೆ ನಡೆದಿರಬಹುದು ಎಂದು ಊಹಿಸಲಾಗಿದೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇನ್ನು ಇವರ ಮೃತದೇಹವನ್ನು ಕಸ ಸಾಗಿಸುವ ಕಾರ್ಪೋರೇಷನ್‌ ಲಾರಿಯಲ್ಲಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ ಪೊಲೀಸರ ಕ್ರಮಕ್ಕೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ