News

ಮಂಗಳೂರು: ಎಸ್‌ಎಫ್‌‌ಐ ಕಾರ್ಯಕರ್ತೆ ಮಾಧುರಿ ಬೋಳಾರ್ ಗೆ ಸಾಮಾಜಿಕ‌ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ


ಮಂಗಳೂರು, ಜ 14: ಎಸ್‌ಎಫ್‌‌ಐ ಸಂಘಟನೆಯ ಕಾರ್ಯಕರ್ತೆಯಾದ ಮಾಧುರಿ ಬೋಳಾರ್ ಅವರಿಗೆ ಸಾಮಾಜಿಕ‌ ಜಾಲತಾಣದಲ್ಲಿ ಕಿರುಕುಳ, ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಆರೋಪಿಯನ್ನು ಪೊಲೀಸರು ನಗರದ ಪಂಪವೆಲ್ ಬಳಿ ಬಂಧಿಸಿದ್ದಾರೆ. ಬಂಧಿತನನ್ನು ಶ್ರೀಹರಿ ಅಲಿಯಾಸ್‌ ಹರೀಶ್‌ ದೇವಾಡಿಗ ಅಲಿಯಾಸ್ ಕಕ್ಕಿಂಜೆ ಹರೀಶ್‌ ಎಂದು ಗುರುತಿಸಲಾಗಿದೆ. ಶ್ರೀಹರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕಕ್ಕಿಂಜೆ ಬಳಿಯ ತೋಟತಾಡಿ ಗ್ರಾಮದ ಬೈಲಂಗಡಿ ಗಾಂದೋಟ್ಯ ಮನೆ ನಿವಾಸಿ. ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣ ಸಂಬಂಧ ಇನ್ನೂ ಕೆಲ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಕಾರ್ಯದರ್ಶಿಯೂ ಆಗಿರುವ ಮಾಧುರಿ ನೀಡಿರುವ ದೂರಿನ ಅನ್ವಯ ಜ.9ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.