News

ಮುಸ್ಲಿಂ ಧರ್ಮದವರನ್ನು ಎಲ್ಲೆಡೆ ಅನುಮಾನದಿಂದ ನೋಡುತ್ತಾರೆ – ಖಾದರ್

ಧಾರವಾಡ, ಜ13: ಮುಸ್ಲಿಂ ಸಮುದಾಯದವರನ್ನು ಎಲ್ಲಾ ಕಡೆ ಅನುಮಾನದಿಂದ ನೋಡುತ್ತಾರೆ ಎಂದು ಆಹಾರ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಧಾರವಾಡದ ಮುಸ್ಲಿಂ ನೌಕರರ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಾನು ವಿಮಾನ ನಿಲ್ದಾಣದಲ್ಲಿ ಬರುವಾಗ ಯು.ಟಿ.ಖಾದರ್ ಅನ್ನುವ ಹೆಸರು ಕೇಳಿ ಎರಡು ಸಲ ಚೆಕ್ ಮಾಡಿದ್ದಾರೆ. ಅದಕ್ಕೆ ಏನು ಮಾಡುವುದು, ಉಪಾಯವಿಲ್ಲ, ನಾವು ತಾಳ್ಮೆಯಿಂದ ಇರಬೇಕಾಗುತ್ತದೆ ಎಂದು ನುಡಿದರು.

ಮುಸ್ಲಿಂ ಬಾಂಧವರಿಗೆ ಸರ್ಕಾರಿ ಕ್ಷೇತ್ರ ಮತ್ತು ಇತರೆ ಕಡೆ ಕೆಲಸ ನಿರ್ವಹಿಸುವಾಗ ಸ್ವಲ್ಪ‌ ಜಾಸ್ತಿಯೇ ತೊಂದರೆ ಬರುತ್ತದೆ. ಮುಸ್ಲಿಂರು ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧನಿ ಎತ್ತುವ ಹಾಗೂ ಇಲ್ಲ. ಸಮಾಜ ಮುಸ್ಲಿಂರಿಗೆ ಒಡ್ಡುತ್ತಿರುವ ಎಲ್ಲ‌ ಕಷ್ಟಗಳನ್ನು ಮೀರಿ ನಡೆಯುವಂತಹ ಶಕ್ತಿ ಮುಸ್ಲಿಂ ಬಾಂಧವರಲ್ಲಿ ಬರಬೇಕು. ಜನಪ್ರತಿನಿಧಿ ಹಾಗೂ ಅಧಿಕಾರಿ ಯಾರೇ ಇರಲಿ ನಾವು ಜನರೊಂದಿಗೆ ಪ್ರೀತಿ ಪೂರ್ವಕವಾಗಿ ಇರಬೇಕು ಎಂದು ಅವರು ಹೇಳಿದ್ದಾರೆ.