News

ಗೆದ್ದು ಬಂದ 25 ಲಕ್ಷ ಹಣವನ್ನು ಕ್ಯಾನ್ಸರ್ ಆಸ್ಪತ್ರೆಗೆ ದಾನವಾಗಿ ನೀಡಿದ ಪಿ.ವಿ ಸಿಂಧು

ಹೈದರಾಬಾದ್, ಜ 13: ಜನಪ್ರಿಯ ಟಿವಿ ರಿಯಾಲಿಟಿ ಶೋವೊಂದರಲ್ಲಿ ಗೆದ್ದ ಹಣವನ್ನು ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು  ಕ್ಯಾನ್ಸರ್‌ ಆಸ್ಪತ್ರೆಯೊಂದಕ್ಕೆ ದಾನವಾಗಿ ನೀಡಿದ್ದಾರೆ.

ಪಿವಿ ಸಿಂಧು ಅವರು ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, 25 ಲಕ್ಷ ರೂಪಾಯಿಗಳನ್ನು ಗೆದ್ದಿದ್ದರು. ಇದೀಗ ಗೆದ್ದು ಬಂದ ಹಣವನ್ನು ಬಸವತಾರಕಂ ಇಂಡೋ-ಅಮೆರಿಕನ್‌ ಎನ್ನುವ ಕ್ಯಾನ್ಸರ್‌ ಆಸ್ಪತ್ರೆಗೆ ದಾನ ಮಾಡಿದ್ದಾರೆ. 

ಪಿವಿ ಸಿಂಧು ಅವರ ಈ ಕಾರ್ಯಕ್ಕೆ ಆಸ್ಪತ್ರೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಪತ್ರೆಯ ಮುಖ್ಯಸ್ಥರಾಗಿರುವ ಟಾಲಿವುಡ್‌ ನಟ ಬಾಲಯ್ಯ ಅವರಿಗೆ 25 ಲಕ್ಷ ರೂ. ಚೆಕ್‌ನ್ನು ದಾನವಾಗಿ ನೀಡಿದ್ದಾರೆ.