News

ಇಲ್ಯಾಸ್ ನನಗೆ ವೈಯಕ್ತಿಕವಾಗಿ ಪರಿಚಯ ಇಲ್ಲ ಆದರೆ ಶೀಘ್ರ ಕೊಲೆಯ ತನಿಖೆ ಆಗಲಿ - ಸಚಿವ ಖಾದರ್

ಧಾರವಾಡ, ಜ 13: ದೀಪಕ್ ಕೊಲೆ ಪ್ರಕರಣದ ಆರೋಪಿಯೆಂದು ಹೇಳಲಾಗಿದ್ದ ಟಾರ್ಗೆಟ್ ಗ್ರೂಪ್ ಸದಸ್ಯ ಇಲ್ಯಾಸ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಖಾದರ್ ಅವರು ಟಾರ್ಗೆಟ್ ಗ್ರೂಪ್ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಎಲ್ಲರೂ ನಮ್ಮ ಸಹಚರರೇ ಆದರೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕ್ಷಮಿಸಲಾಗದು, ಅಪರಾಧಿಗೆ ಶಿಕ್ಷೆ ಆಗಬೇಕು, ಕೊಲೆ ಅಲ್ಲ, ಇಲ್ಯಾಸ್ ಹತ್ಯೆ ಮಾಡಿದವರನ್ನು ಶೀಘ್ರವಾಗಿ ಬಂಧಿಸುವ ಕಾರ್ಯ ಆಗಬೇಕು ಎಂದು ತಿಳಿಸಿದ್ದಾರೆ.

ಇಲ್ಯಾಸ್ ನನಗೆ ವೈಯಕ್ತಿಕವಾಗಿ ಪರಿಚಯ ಇಲ್ಲ ಎಂಬುದನ್ನು ಈ ಮುಂಚೆಯೇ ಸ್ಪಷ್ಟಪಡಿಸಿದ್ದೇನೆ. ನಮಗೆ ಆಗದವರು ಆತನನ್ನು ಆನ್‌ಲೈನ್ ಮೂಲಕ ಕಾಂಗ್ರೆಸ್‌ಗೆ ಸೇರಿಸಿದ್ದರು. ಪುತ್ತೂರು ಯೂತ್ ಕಾಂಗ್ರೆಸ್‌ ಚುನಾವಣೆಗೆ ಸ್ಪರ್ಧಿಸಿ, ಸೋತು ಉಪಾಧ್ಯಕ್ಷನಾಗಿದ್ದ ಎಂದು ಅವರು ಹೇಳಿದರು.