News

ಕಾಸರಗೋಡು: ಕೊಡಪಾನದೊಳಗೆ ತಲೆ ಸಿಲುಕಿ ಪರದಾಡಿದ ನಾಯಿಯ ರಕ್ಷಣೆ

ಕಾಸರಗೋಡು, ಜ 13: ಅಲ್ಯೂಮಿನಿಯಂ ಕೊಡದೊಳಗೆ ನಾಯಿಯ ತಲೆ ಸಿಲುಕಿ, ನಾಯಿ ಅನೇಕ ತಾಸುಗಳ ಕಾಲ ಒದ್ದಾಡಿದ ಘಟನೆ ಕಾಸರಗೋಡಿನ ಕಾಞ೦ಗಾಡ್ ನಲ್ಲಿ ನಡೆದಿದೆ.

ಸಾವು ಬದುಕಿನ ನಡುವೆ ಗಂಟೆಗಳ ಕಾಲ ಒದ್ದಾಡುತ್ತಿದ್ದ ನಾಯಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಮನೆಯೊಂದರ  ಹೊರಗಡೆ ಇಡಲಾಗಿದ್ದ ಅಲ್ಯೂಮಿನಿಯಂ ಕೊಡದೊಳಗೆ ನಾಯಿ ತಲೆ ಹಾಕಿದಾಗ, ತಲೆ ಅದರೊಳಗೆ ಸಿಲುಕಿಕೊಂಡಿದೆ. ಅಡ್ಡಾದಿಡ್ಡಿ ಓಡಿದ ನಾಯಿ ದುರ್ಗಾ ಶಾಲೆ ಬಳಿ ತಲಪಿದ್ದು, ಅಲ್ಲಿನ ಜಯನ್ ಎಂಬ ಶಿಕ್ಷಕ ನಾಯಿಯನ್ನು ಹಿಡಿದು ಅಗ್ನಿಶಾಮಕ ದಳದವರಿಗೆ ಮಾಹಿತಿ  ನೀಡಿದ್ದರು.

ಸ್ಥಳಕ್ಕೆ ತಲಪಿದ ಅಗ್ನಿಶಾಮಕ ದಳದವರು ಕೊಡಪಾನವನ್ನು ತುಂಡರಿಸಿ ನಾಯಿಯನ್ನು ತೆಗೆದು ರಕ್ಷಿಸಿದರು.