News

ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ದೇವರು ಬುದ್ದಿ ಕೊಡಲಿ - ಸಚಿವ ರೈ

ಮಂಗಳೂರು, ಝ 12: ದೀಪಕ್ ಹತ್ಯೆಯ ಆರೋಪವನ್ನು ನಳಿನ್ ನನ್ನ ಮೇಲೆ ಹಾಕಿದ್ದರು. ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ದೇವರು ಬುದ್ದಿ ಕೊಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ, ಸುರತ್ಕಲ್ ಸಮೀಪದ ಕಾಟಿಪಳ್ಳದ ದೀಪಕ್ ರಾವ್ ಹತ್ಯೆ ವಿಚಾರದಲ್ಲಿ ತನ್ನ ಪಾತ್ರವಿದೆಯೆಂದು ಸಂಸದ ನಳಿನ್ ಕುಮಾರ್ ಹೇಳಿದ್ದರು. ಹಾಗಾದ್ರೆ ಬಶೀರ್ ಹತ್ಯೆಯಲ್ಲಿ ನಳಿನ್ ಪಾತ್ರ ಇದೆ ಅಂತ ನಾನು ಹೇಳುವುದಿಲ್ಲ, ಹೀಗಂತ ಕೆಟ್ಟ ಹೇಳಿಕೆಯನ್ನು ಕೂಡ ನಾನು ನೀಡುವುದಿಲ್ಲ. ಆದರೆ ನಳಿನ್ ನನ್ನ ಮೇಲೆ ದೀಪಕ್ ಹತ್ಯೆಯ ಆರೋಪ ಹಾಕಿದ್ದರು. ದೀಪಕ್ ಹತ್ಯೆ ಪ್ರಕರಣದಲ್ಲಿ ನಳಿನ್ ನನ್ನ ಹೆಸರನ್ನು ಹೇಳಿದ್ದರು. ಬಶೀರ್ ಹತ್ಯೆಯಲ್ಲಿ ನಳಿನ್ ಕೈವಾಡ ಇದೆಯೇ..? ಈ ರೀತಿಯ ಆರೋಪ ಬಂದಾಗ ಅವರಿಗೆ ನೋವಾಗುತ್ತಂತೆ. ಹಾಗಾದ್ರೆ ಇದರಿಂದ ನನಗೆ, ನನ್ನ ಕುಟುಂಬದವರಿಗೆ ನೋವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. 

ದೀಪಕ್ಹತ್ಯೆಪ್ರಕರಣದಲ್ಲಿಕುಮಾರಸ್ವಾಮಿ ಅವರುಬಿಜೆಪಿಕಾರ್ಪೋರೇಟರ್ಕೈವಾಡಇದೆ ಎಂದು ಹೇಳಿದಾಗ ನಳಿನ್ ಅವರಿಗೆ ನೋವಾಗಿದೆಯಂತೆ. ನನ್ನ ಮೇಲೆ ಆರೋಪ ಹಾಕಿದಾಗ ನನಗೂ ಅದೇ ರೀತಿ ನೋವಾಗಿದೆ. ಇಲ್ಲಿ ನಡೆದ ಎಲ್ಲ ಕೊಲೆಗಳಿಗೆ ನನ್ನ ಹೆಸರನ್ನು ಹೇಳುತ್ತಾ ಬಂದಿದ್ದಾರೆ ಎಂದು ಬೇಸರದಿಂದ ನುಡಿದರು.