News

ಲೆಕ್ಕ ಕೇಳಲು ನೀವ್ಯಾರು - ಅಮಿತ್ ಶಾ ವಿರುದ್ದ ಸಿದ್ದು ಗರಂ

 

ಮೈಸೂರು ಜ 11 : ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೇ ನೀಡಿದ ಅನುದಾನದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡದೆ, ಭ್ರಷ್ಟಾಚಾರಕ್ಕೆ ಬಳಸಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾಗೆ ಇದೀಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟು ಮಾತಿನಲ್ಲಿ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಎಚ್‌ಡಿ ಕೋಟೆಯ ಸರಗೂರಿನಲ್ಲಿ ಈ ಬಗ್ಗೆ ಜ ೧೧ರ ಗುರುವಾರ ಮಾದ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ," ನಮ್ಮ ಲೆಕ್ಕ ಕೇಳಲು ಅಮಿತ್ ಶಾ ಯಾರು' ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರ ಕಾನೂನಾತ್ಮಕವಾಗಿ ರಾಜ್ಯಕ್ಕೆ ನೀಡಬೇಕಾಗಿದ್ದ ತೆರಿಗೆ ಪಾಲನ್ನು ಕೊಟ್ಟಿದ್ದಾರೆ. ನಾವು ಖರ್ಚು ಮಾಡಿದ ಲೆಕ್ಕವನ್ನು ರಾಜ್ಯದ ಜನರಿಗೆ ನೀಡಬೇಕೆ ಹೊರತು ಶಾಗೆ ನೀಡಬೇಕಾದ ಅಗತ್ಯ ಇಲ್ಲ. ಲೆಕ್ಕಚಾರ ಕೇಳಲು ಅವರು ಯಾರು' ಹೇಳಿದರು. ಕೊಡಬೇಕಾದ ಅನುದಾನದಲ್ಲಿ ಕಡಿತ ಮಾಡಿ ನೀಡಿದ್ದಾರೆ, ಎಂದು ಆರೋಪಿಸಿದರು.