News

ನವದೆಹಲಿ :ತರಬೇತಿ ಸಂದರ್ಭ ಹೆಲಿಕ್ಯಾಪ್ಟರ್ ನಿಂದ ಬಿದ್ದು ಸೈನಿಕರಿಗೆ ಗಂಭೀರ ಗಾಯ -ತನಿಖೆಗೆ ಆದೇಶ


ನವದೆಹಲಿ ಜ 11 : ತರಬೇತಿಯ ಸಂದರ್ಭದಲ್ಲಿ ಸೇನಾ ಹೆಲಿಕ್ಯಾಪ್ಟರ್‌ ನಿಂದ ಬಿದ್ದು ಮೂರು ಜನ ಸೈನಿಕರು ಗಂಭೀರ ಗಾಯಗೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 15 ರಂದು ಆಚರಿಸಲಾಗುವ ಸೇನಾ ದಿನಾಚರಣೆಗಾಗಿ ಜ 9 ರ ಮಂಗಳವಾರ ತರಬೇತಿಯಲ್ಲಿ ನಿರತರಾಗಿದ್ದ ವಾಯುಪಡೆಯ ಸೈನಿಕರು ಹೆಲಿಕ್ಯಾಪ್ಟರ್ ನಿಂದ ಆಯಾತಪ್ಪಿ ಬಿದ್ದಿದ್ದಾರೆ. ಅದೃಷ್ಟವಶಾತ್ ಗಂಭೀರ ಗಾಯಗೊಂಡಿರುವ ಸೈನಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇವರು ಹಗ್ಗದ ಮೂಲಕ ಹೆಲಿಕ್ಯಾಪ್ಟರ್‌ನಿಂದ ಇಳಿಯುವ ಸಾಹಸ ತರಬೇತಿ ನಡೆಸುವ ವೇಳೆ ಹಗ್ಗ ಕಳಚಿ ಬಿದ್ದು ಈ ಅವಘಡ ಸಂಭವಿಸಿದೆ. .ಮೂವರು ಯೋಧರು 50 ಅಡಿ ಎತ್ತರಿದಿಂದ ಒಬ್ಬರ ಮೇಲೆ ಒಬ್ಬರು ಬಿದ್ದಿರುವುದು ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸೇನೆ, ತನಿಖೆಗೆ ಆದೇಶಿಸಿದೆ.