News

ಬಂಟ್ವಾಳ: ಸರ್ಕಾರಿ ಜಾಗದಲ್ಲಿನ ಮನೆ ತೆರವು- ಸಂತ್ರಸ್ತ ಕುಟುಂಬದಿಂದ ಪ್ರತಿಭಟನೆ


ಬಂಟ್ವಾಳ ಜ 11: ವಿಟ್ಲ ಕಸಬಾ ಗ್ರಾಮದ ಕೈಂತಿಲ ಎಂಬಲ್ಲಿ ಸರಕಾರಿ ಜಾಗದಲ್ಲಿ ವಾಸ ಮಾಡುತ್ತಿದ್ದ ವಾದಿರಾಜ ಆಚಾರಿಯವರ ಮನೆಯನ್ನು ದ್ವಂಸ ಮಾಡಿ ಬೀದಿಪಾಲು ಮಾಡಿದ ತಹಸೀಲ್ದಾರ್ ಕ್ರಮ ಖಂಡಿಸಿ ಅವರ ಕುಟುಂಬದ ಸದಸ್ಯರು ಬಂಟ್ವಾಳ ತಹಸೀಲ್ದಾರ್ ಕಛೇರಿ ಮುಂದೆ ಜ 10 ರ ಬುಧವಾರ ಧರಣಿ ನಡೆಸಿದರು. ಜಿಪಂ ಸದಸ್ಯ ತುಂಗಪ್ಪ ಬಂಗೇರ ,ಸಾಮಾಜಿಕ ಕಾರ್ಯಕರ್ತ ಪ್ರಭಾಕರ ದೈವಗುಡ್ಡೆ,ದಲಿತ ಮುಖಂಡ ಭಾನು ಚಂದ್ರ ಕೃಷ್ಣಾಪುರ ಅವರು ಭೇಟಿ ನೀಡಿ ನೈತಿಕ ಬೆಂಬಲ ನೀಡಿದರು. ಧರಣಿ ನಿರತರ ಸ್ಥಳಕ್ಕೆ ತಹಸೀಲ್ದಾರ್ ಪುರಂದರ ಹೆಗ್ಡೆ ಅವರು ಭೇಟಿ ನೀಡಿ ಅದೇ ಸ್ಥಳ ದಲ್ಲಿ ಮನೆಯನ್ನು ಪುನರ್ ಸ್ಥಾಪಿಸಿ ವಾಸ ಮಾಡುವಂತೆ ಭರವಸೆ ನೀಡಿದರು.ಇದೇ ವೇಳೆ ಸಚಿವ ರಮಾನಾಥ ರೈ ಅವರು ಧರಣಿ ನಿರತ ಕುಟುಂಬವನ್ನು ಭೇಟಿಯಾಗಿ ಮಾಹಿತಿ ಪಡೆದು ಕೊಂಡು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.