News

ಉಡುಪಿ: ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ವಿಚಾರಣೆ ಜ. 25 ಕ್ಕೆ ಮುಂದೂಡಿಕೆಉಡುಪಿ, ಜ 10: ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜನವರಿ 25 ಕ್ಕೆ ಮುಂದೂಡಿದೆ. ಆರೋಪಿಗಳ ಪರ ವಕೀಲ ನ್ಯಾಯವಾದಿ ಅರುಣ್ ಬಂಗೇರ ಸಿಐಡಿ ಪೊಲೀಸರು ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಇದರೊಂದಿಗೆ ಸಿಐಡಿ ಪೊಲೀಸ್ ಅಧಿಕಾರಿ ಕೂಡಾ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ವಿಚಾರಣೆಯ ದಿನಾಂಕವನ್ನು ಜ 25 ಕ್ಕೆ ಮುಂದೂಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಆರೋಪಿಗಳಾದ ನವನೀತ್ ಶೆಟ್ಟಿ, ರಾಜೇಶ್ವರಿ ಶೆಟ್ಟಿ, ಮತ್ತು ನಿರಂಜನ್ ಭಟ್ರ ಹಾಜರಾತಿಯನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಧೀಶರು ಖಚಿತ ಪಡಿಸಿಕೊಂಡರು. ಇನ್ನು ಸಾಕ್ಷ್ಯ ನಾಶದ ಆರೋಪ ಎದುರಿಸುತ್ತಿರುವ ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರ ನ್ಯಾಯಾಲಯದಲ್ಲಿ ಹಾಜರಿದ್ದರು.